ಮಲ್ಪೆ ಬೀಚ್‌ನಲ್ಲಿ ಯುವತಿ ಸಮುದ್ರಪಾಲು, ಮೂವರ ರಕ್ಷಣೆ

drowning
Published on

ಉಡುಪಿ: ಸಮುದ್ರದಲ್ಲಿ ಆಟವಾಡುತ್ತಿದ್ದ ವೇಳೆ ಅಲೆಗೆ ಸಿಲುಕಿ ನಾಲ್ವರು ಸಮುದ್ರ ಪಾಲಾಗಿದ್ದು, ಸ್ಥಳೀಯರ ಕಾರ್ಯಚರಣೆಯಿಂದಾಗಿ ಮೂವರ ಪ್ರಾಣ ಉಳಿದಿದ್ದು, ಒಬ್ಬರು ನಾಪತ್ತೆಯಾಗಿದ್ದಾರೆ. ದೇಜಮ್ಮ(20) ಎಂಬ ಯುವತಿ ನಾಪತ್ತೆಯಾದವರು. ನಾಲ್ವರು ಮೈಸೂರಿನಲ್ಲಿ ಬಿಎಸ್ಸಿ ವಿದ್ಯಾರ್ಥಿಗಳಾಗಿದ್ದು, ಮೂವರು ಯುವತಿಯರು, ಒಬ್ಬ ಯುವಕನಿದ್ದ. ಭಾನುವಾರ ಉಡುಪಿ ಜಿಲ್ಲೆಗೆ ಪ್ರವಾಸಕ್ಕೆ ಆಗಮಿಸಿದ್ದರು. ಮಲ್ಪೆ ಬೀಚ್‌ನಲ್ಲಿ ಸಮುದ್ರದಲ್ಲಿ ಆಟವಾಡುತ್ತಿದ್ದರು ಯುವಕ, ಯುವತಿಯರು ಸ್ಥಳೀಯರ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸದೇ ಅಪಾಯಕ್ಕೆ ಸಿಲುಕಿದರು. ಬೃಹತ್ ಅಲೆಗೆ ಎಲ್ಲರೂ ನೀರು ಪಾಲಾಗಿದ್ದರು. ಮಾಹಿತಿ ತಿಳಿದ ಕೂಡಲೆ ಸ್ಥಳೀಯ ಯುವಕರು ಸಮುದ್ರಕ್ಕೆ ಜಿಗಿದು ಮೂವರನ್ನು ರಕ್ಷಿಸಿದರು. ಯುವತಿ ನಾಪತ್ತೆಯಾಗಿದ್ದು, ಹುಡುಕಾಟ ಮುಂದುವರಿದಿದೆ ಎಂದು ಮಲ್ಪೆ ಪೊಲೀಸರು ವಿಜಯವಾಣಿಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net