

ಸವದತ್ತಿ: ಅನಾರೋಗ್ಯಕರ ಆಹಾರ ಪದ್ಧತಿ ಹಾಗೂ ಜಡವಾದ ಜೀವನ ಶೆಲಿಯಿಂದ ಸಣ್ಣ ವಯಸ್ಸಿಗೆ ಮೂಳೆನೋವು ಕಾಣಿಸಿಕೊಳ್ಳುತ್ತಿದೆ ಎಂದು ಎಲುಬು ಕೀಲು ತ ಡಾ.ಹೇಮಂತ ಭಸ್ಮೆ ಹೇಳಿದರು.
ಪಟ್ಟಣದ ಕೋರ್ಟ್ ಆವರಣದಲ್ಲಿ ಜೇಂಟ್ಸ್ ಗ್ರೂಪ್ ಸವದತ್ತಿ ಸಹಯೋಗದಲ್ಲಿ ಶ್ರೀ ಹಾಸ್ಪಿಟಲ್ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರ ಹಾಗೂ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ನ್ಯಾಯಮೂರ್ತಿ ಸಿದ್ಧರಾಮ ರೆಡ್ಡಿ ಉದ್ಘಾಟಿಸಿದರು. ಬಿಪಿ, ಶುಗರ್ ಹಾಗೂ ಔಷಧ ಉಚಿತವಾಗಿ ನೀಡಲಾಯಿತು. 200ಕ್ಕೂ ಹೆಚ್ಚಿನ ಜನರು ಶಿಬಿರದ ಸದುಪಯೋಗ ಪಡೆದರು. ಡಾ. ನಯನಾ ಭಸ್ಮೆ ಹಾಗೂ ಸಿಬ್ಬಂದಿ ತಪಾಸಣೆ ನಡೆಸಿದರು. ನ್ಯಾಯಾಧೀಶ ಕಷ್ಣಪ್ಪ ಪಮಾರ, ನಾಗರಾಜ ಬೋಣಗೇರಿ, ಎಂ.ಎಂ. ಎಲಿಗಾರ, ಜೆ.ಬಿ. ಮುನವಳ್ಳಿ ಇದ್ದರು.