ಮಲ್ನಾಡ್ ಅಕಾಡೆಮಿ ಕಾಲೇಜು ಉತ್ತಮ ಸಾಧನೆ

18 CRP 03
Published on

ಚನ್ನರಾಯಪಟ್ಟಣ: 2019-20 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಟ್ಟಣದ ಮಲ್ನಾಡ್ ಅಕಾಡೆಮಿ ಪಿಯು ಕಾಲೇಜಿಗೆ ಶೇ.100ರಷ್ಟು ಫಲಿತಾಂಶ ದೊರೆತಿದೆ.

ಒಟ್ಟು 69 ವಿದ್ಯಾರ್ಥಿಗಳ ಪೈಕಿ 35 ಅತ್ಯುನ್ನತ ಹಾಗೂ 34 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ವಿದ್ಯಾರ್ಥಿ ಎಸ್.ನಿಧಿನ್ 585 ಅಂಕ ಪಡೆಯುವ ಮೂಲಕ ವಿಜ್ಞಾನ (ಪಿಸಿಎಂಬಿ) ವಿಭಾಗದಲ್ಲಿ ತಾಲೂಕಿಗೆ ಟಾಪರ್ ಆಗಿ ಹೊರಹೊಮ್ಮಿದ್ದಾನೆ.

ಇದೇ ವೇಳೆ ಕಾಲೇಜು ವತಿಯಿಂದ ಎಸ್.ನಿಧಿನ್‌ನನ್ನು ವಿಶೇಷವಾಗಿ ಅಭಿನಂದಿಸಲಾಯಿತು. ಉಪ ಪ್ರಾಂಶುಪಾಲರಾದ ದಿಲೀಪ್, ಜೆ.ಎಸ್.ಧನಂಜಯ್, ಲೈಬ್ರರಿಯನ್ ಚೇತನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net