ಮಲ್ಲು ಜಮಖಂಡಿಯ "ವಿದ್ಯಾ ಗಣೇಶ' 52 ಥೇಟರ್​ಗಳಲ್ಲಿ ತೆರೆ

New Mallu Jamakhandi
Published on

ಹುಬ್ಬಳ್ಳಿ : ಸರ್ಕಾರಿ ಶಾಲೆಯನ್ನು ಉಳಿಸಿ, ಬೆಳೆಸುವ ಕಥಾವಸ್ತು ಒಳಗೊಂಡಿರುವ, ಉತ್ತರ ಕರ್ನಾಟಕದ ಪ್ರತಿಭೆ ಮಲ್ಲು ಜಮಖಂಡಿ ಹಾಗೂ ಇನ್ನಿತರ ಕಲಾವಿದರು ನಟಿಸಿರುವ ವಿದ್ಯಾ ಗಣೇಶ ಕನ್ನಡ ಚಲನಚಿತ್ರ ರಾಜ್ಯದ 52 ಚಿತ್ರ ಮಂದಿರಗಳಲ್ಲಿ ತೆರೆಕಂಡಿದೆ ಎಂದು ಚಿತ್ರದ ನಿರ್ದೇಶಕ ಉಮೇಶ ಚಂದ್ರ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಸರ್ಕಾರಿ ಶಾಲೆ ಉಳಿಸಿ, ಬೆಳೆಸುವ ಚಿತ್ರಕಥೆ ಜತೆಗೆ ಸುಂದರವಾದ ಪ್ರೇಮಕಥೆಯನ್ನೂ ಈ ಚಿತ್ರ ಹೊಂದಿದೆ ಎಂದು ಹೇಳಿದರು.

ಈ ಚಿತ್ರದಲ್ಲಿ ಸಂರ್ಪೂಣವಾಗಿ ಉತ್ತರ ಕನ್ನಡ ಭಾಷೆ ಅಳವಡಿಸಲಾಗಿದೆ. ಜಮಖಂಡಿ ಸುತ್ತಲಿನ ಪ್ರದೇಶದಲ್ಲಿ 20 ದಿನಗಳವರೆಗೆ ಚಿತ್ರೀಕರಣ ಮಾಡಲಾಗಿದೆ. ಸವಾಲ್​-ಜವಾಬ್​ ರೀತಿಯ ಒಂದು ಹಾಡು ಸೇರಿದಂತೆ ಒಟ್ಟು 3 ಹಾಡುಗಳು ಚಿತ್ರದಲ್ಲಿವೆ ಎಂದರು.

ರಮೇಶ ಭಟ್​, ಯೂಟ್ಯೂಬ್​ ಕಲಾವಿದ ಆನಂದ, ಖಳನಾಯಕರಾಗಿ ಕಾಕ್ರೋಚ್​ ಸುಧಿ, ಸುಚೇಂದ್ರ ಪ್ರಸಾದ ಹಾಗೂ ಇನ್ನಿತರ ಕಲಾವಿದರು ನಟಿಸಿದ್ದಾರೆ ಎಂದು ಹೇಳಿದರು.

ಚಿತ್ರನಟ ಮಲ್ಲುಜಮಖಂಡಿ ಮಾತನಾಡಿ, ಇದು ನನ್ನ 2ನೇ ಚಲನಚಿತ್ರ. ಯೂಟ್ಯೂಬ್​ ಚಿತ್ರೀಕರಣಕ್ಕೂ, ಸಿನೆಮಾ ಚಿತ್ರೀಕರಣಕ್ಕೂ ಬಹಳಷ್ಟು ವ್ಯತ್ಯಾಸ ಇದೆ ಎಂದು ಹೇಳಿದರು.

ನಾಯಕಿ ನಟಿ ಸುಲಾ, ಕಲಾವಿದರಾದ ಆನಂದ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net