ಮಲ್ಲಿಕಾರ್ಜುನ ವಾಡಿಯಲ್ಲಿ ಚಕ್ಕಡಿ ಸ್ಪರ್ಧೆ

11BK15
Published on

ಬಸವಕಲ್ಯಾಣ: ಮಲ್ಲಿಕಾರ್ಜುನ ವಾಡಿ ಗ್ರಾಮದಲ್ಲಿ ಕಾರ ಹುಣ್ಣಿಮೆ ನಿಮಿತ್ತ ಬುಧವಾರ ರೈತರು ಸಡಗರ ಸಂಭ್ರಮದೊಂದಿಗೆ ಚಕ್ಕಡಿ ಓಟದಲ್ಲಿ ಭಾಗವಹಿಸಿದರು. ಶೃಂಗರಿಸಿದ ಎತ್ತುಗಳನ್ನು ಚಕ್ಕಡಿಗಳಿಗೆ ಕಟ್ಟಿಕೊಂಡು ಓಟದ ಸ್ಪರ್ಧೆಯಲ್ಲಿ ರೈತರು ಎತ್ತುಗಳ ಶಕ್ತಿ ಪ್ರದರ್ಶನ ಮಾಡಿ, ಸಾಮರ್ಥ್ಯ ಪಣಕ್ಕಿಟ್ಟು, ಸಂಭ್ರಮದಿಂದ ಭಾಗವಹಿಸಿದರು.

ವಿಜೇತರು: ಲಕ್ಷ್ಮಣ ಪುಣೆ (ಪ್ರಥಮ), ಶರಣಪ್ಪ. ಕುರುಮೆ (ದ್ವಿ), ನಾಗಪ್ಪ ಪುಣೆ ಅವರ ಚಕ್ಕಡಿ ಗಾಡಿಗಳು ತೃತೀಯ ಪ್ರಶಸ್ತಿ ಪಡೆದವು. ಗೋರಖ ಹೆಗಡೆ ಅವರ ಜೋಡಿ ಎತ್ತುಗಳು ಅದ್ಭುತ ಶೃಂಗಾರ ಪ್ರಶಸ್ತಿಗೆ ಭಾಜನವಾದವು. ಭಾಗವಹಿಸಿದ ಎಲ್ಲ ಗಾಡಿಯ ಯಜಮಾನನಿಗೆ ಸತೀಶ ಪೋಸ್ತರ್​ ಅವರಿಂದ "ಛತ್ರಿ" ಗಳನ್ನು ನೀಡಲಾಯಿತು.

ಗ್ರಾಮೀಣ ಪೊಲೀಸ್​ ಠಾಣೆ ಪಿಎಸ್​ಐ ನಾಗೇಂದ್ರ, ಗ್ರಾಪಂ ಅಧ್ಯೆ -ನಂದಾಬಾಯಿ. ಪ್ರಭು, ಉಪಾಧ್ಯಕ್ಷ ಅನಿತಾ ಮಲ್ಲಿಕರ‍್ಜುನ, ಸದಸ್ಯರಾದ ವಿಷ್ಣುರ‍್ಧನ್​ ಪುಣೆ, ಗೋದಾವರಿ ಪುಣೆ, ಸುಭಾಷ ಅಂತಪಳ್ಳಿ, ಸಂತೋಷ ಸೀಗಿ, ಅಕ್ರಮ, ಅಜಿಮೋದ್ದಿನ್​, ಪ್ರಭು ಜಮಾದಾರ, ರಾಜು ಸೀಗಿ, ನಾಗರೆಡ್ಡಿ ಪುಣೆ, ವಿಠ್ಠಲ್​ ಹೆಗಡೆ, ಶಂಕರ ಚಿಂತಾಲೆ, ಬಾರಾಬಾಯಿ, ಶಂಕರ ಹೆಗಡೆ, ಶ್ರೀಕಾಂತ ಪುಣೆ, ಪ್ರವಿಣ ಪುಣೆ, ತುಲಸಿರಾಮ ಇಟಕಲೆ, ರಾಘವೇಂದ್ರ ಪುಣೆ, ಹರಿ ಇರವಟ್ಟೆ, ಕಾಶಣ್ಣ ಇಟಕಲೆ, ಮಾಣಿಕ ಬಾರಾಬಾಯಿ ಇತರರಿದ್ದರು. ಮಚ್ಚಿಂದ್ರ ಪುಣೆ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net