

ರಬಕವಿ/ಬನಹಟ್ಟಿ: ನಗರಸಭೆ ವ್ಯಾಪ್ತಿಯ ರಾಂಪುರ ನಗರದ ಶ್ರೀ ವೀರಭದ್ರೇಶ್ವರ ಹಾಗೂ ಮಲ್ಲಿಕಾರ್ಜುನ ದೇವರ 35ನೇ ವರ್ಷದ ಜಾತ್ರಾ ಮಹೋತ್ಸವ ಮಂಗಳವಾರ ಸಂಭ್ರಮದಿಂದ ನಡೆಯಿತು.
ಬೆಳಗ್ಗೆ 7 ಗಂಟೆಗೆ ಶ್ರೀ ವೀರಭದ್ರೇಶ್ವರ ಸ್ವಾಮಿ ಹಾಗೂ ಮಲ್ಲಿಕಾರ್ಜುನ ಸ್ವಾಮಿಯವರ ಪಲ್ಲಕ್ಕಿ ಉತ್ಸವ ಸಕಲ ವಾದ್ಯಮೇಳ ಮತ್ತು ವೀರಪುರವಂತರ ಹಾಗೂ ಭಕ್ತ ಸಮೂಹದೊಂದಿಗೆ ನೆರವೇರಿತು.
10 ಗಂಟೆಗೆ ಅಗ್ಗಿ ಹಾಯುವುದು, 11.30ಕ್ಕೆ ಮಹಾ ಅನ್ನದಾಸೋಹ ಕಾರ್ಯಕ್ರಮ ನಡೆಯಿತು. ನಗರದ ಹಿರಿಯರಾದ ಬಸವಪ್ರಭು ಹಟ್ಟಿ, ಪರಪ್ಪ ಬಿಳ್ಳೂರ, ಶಿವಪುತ್ರ ಮುರಗುಂಡಿ, ಈರಪ್ಪ ಗೌಡ್ರು, ರುದ್ರಪ್ಪ ಅರಳಿಕಟ್ಟಿ, ಮಲ್ಲಪ್ಪ ಆರಗಿ, ಲಕ್ಷ್ಮಣ ತಳವಾರ ಮತ್ತಿತರರಿದ್ದರು.