

ಚಿತ್ರದುರ್ಗ: ಪತಂಜಲಿ ಯೋಗ ಸಮಿತಿ ಮೂಲಕ ನೂರಾರು ಮಂದಿಗೆ ಯೋಗದ ಮಹತ್ವ ತಿಳಿಸಿದ ಮಲ್ಲಿಕಾರ್ಜುನಪ್ಪ ಸರಳ ಜೀವಿಯಾಗಿದ್ದರು ಎಂದು ಮಾಜಿ ಸಂಸದ ಜನಾರ್ದನಸ್ವಾಮಿ ಸ್ಮರಿಸಿದರು.
ಚಳ್ಳಕೆರೆ ಗೇಟ್‌ನ ಎಸ್‌ಎಸ್‌ಕೆಎಸ್ ಸಮುದಾಯ ಭವನದಲ್ಲಿ ಶುಕ್ರವಾರ ದಿ.ಮಲ್ಲಿಕಾರ್ಜುನಪ್ಪ ಅವರ ಸ್ಮರಣಾರ್ಥ ಕಬೀರಾನಂದಾಶ್ರಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಚಿತ್ರದುರ್ಗದ ಮೂಲಸೌಕರ್ಯಗಳ ಕುರಿತು ಆಗಿಂದಾಗ್ಗೆ ಚರ್ಚಿಸುತ್ತಿದ್ದರು. ಅನೇಕ ಯೋಜನೆಗಳ ಕುರಿತು ವಿಶೇಷ ಆಸಕ್ತಿ ಹೊಂದಿದ್ದರು. ಸಜ್ಜನಿಕೆಯುಳ್ಳ ಅವರು ಸಮಾಜಮುಖಿ ಚಿಂತಕರಾಗಿದ್ದರು ಎಂದು ನೆನಪಿಸಿಕೊಂಡರು.
ಶ್ರೀ ಶಿವಲಿಂಗಾನಂದ ಸ್ವಾಮೀಜಿ ಮಾತನಾಡಿ, ಅಂಚೆ ಇಲಾಖೆಯಲ್ಲಿ ಹೆಡ್ ಪೋಸ್ಟ್ ಮಾಸ್ಟರ್ ಆಗಿ ನಿವೃತ್ತಿ ಹೊಂದಿದ ಬಳಿಕ ಯೋಗ ಜಾಗೃತಿ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಹುಟ್ಟು-ಸಾವು ಖಚಿತ. ಬದುಕಿದ್ದಾಗ ನಾಲ್ಕೈದು ಜನರಿಗೆ ಉಪಕಾರ ಮಾಡುವ ಮನೋಭಾವ ಅಗತ್ಯ ಎಂದರು.
ಇತಿಹಾಸ ಸಂಶೋಧಕ ಡಾ.ಬಿ. ರಾಜಶೇಖರಪ್ಪ, ಚಿಂತಕ ಜಿ.ಎನ್.ಮಲ್ಲಿಕಾರ್ಜುನಪ್ಪ, ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಕಾರ್ಯದರ್ಶಿ ಕೆ.ಎಂ.ವೀರೇಶ್, ಜಿಪಂ ಮಾಜಿ ಅಧ್ಯಕ್ಷ ರವಿಕುಮಾರ್ ಇತರರಿದ್ದರು.