

ಕಲಬುರಗಿ: ಚುನಾವಣೆಯಲ್ಲಿ ಹಣ ಖರ್ಚು ಮಾಡಬಾರದು ಎಂದು ಕಾಂಗ್ರೆಸ್ ಖಾತೆಯನ್ನು ಲಾಕ್ ಮಾಡಿಸಿರುವ ಕೇಂದ್ರ ಸರ್ಕಾರ, ತೆರಿಗೆ ಇಲಾಖೆ ಮೂಲಕ ಪಕ್ಷಕ್ಕೆ ಕೋಟ್ಯಂತರ ರೂ. ದಂಡ ಹಾಕಿದೆ ಎಂದು ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.
ನೂತನ ವಿದ್ಯಾಲಯ ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ಐದು ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶ, ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಸಂಗ್ರಹಿಸಿರುವ ಸಾವಿರಾರು ಕೋಟಿ ರೂ. ಬಾಂಡ್ ಬಗ್ಗೆ ಬಹಿರಂಗಪಡಿಸುವAತೆ ಕೋರ್ಟ್ ಸೂಚಿಸಿದೆ. ಜುಲೈವರೆಗೆ ಸಮಯ ಕೇಳಿದ್ದಾರೆ? ಯಾಕೆ ಸಮಯ ಬೇಕು? ಮಾತೆತ್ತಿದ್ದರೆ ಕಾಂಗ್ರೆಸ್ ಲೆಕ್ಕ ಕೇಳುತ್ತಾರೆ. ಬಿಜೆಪಿಗೆ ಒಂದೇ ದಿನ ೩೩೫ ಕೋಟಿ ರೂ. ಹೀಗೆ ಒಟ್ಟು ೬೦೦೦ ಕೋಟಿ ಬಾಂಡ್ ಎಲ್ಲಿಂದ ಬಂತು ಎಂಬುದನ್ನು ತಿಳಿಸಬೇಕು ಎಂದು ಒತ್ತಾಯಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ರಾಜ್ಯದಲ್ಲಿನ ದರಿದ್ರ ಸರ್ಕಾರವನ್ನು ಹೊಡೆದೋಡಿಸಿ ಬೆಳಕಿಗೆ ಬಂದಿದ್ದು. ಎಲ್ಲ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಬಿಜೆಪಿಯವರ ೧೫ ಲಕ್ಷ ರೂ. ಬರಲಿಲ್ಲ. ನಾವು ಮನೆಯೊಡತಿಗೆ ೨೦೦೦ ರೂ. ಕೊಡುತ್ತಿz್ದೆÃವೆ. ಕೇಂದ್ರ ಸರ್ಕಾರ ನಮ್ಮ ಪಾಲಿನ ಹಣ ಕೊಡದಿದ್ದರೂ ೫೨ ಸಾವಿರ ಕೋಟಿ ರೂ. ಗ್ಯಾರಂಟಿಗೆ ಮೀಸಲಿಟ್ಟಿz್ದÉÃವೆ. ಅಂತಲೇ ಕಮಲ ಕೆರೆಗೆ, ತೆನೆ ಹೊಲಕ್ಕೆ, ದಾನ ಮಾಡುವ ಕೈ ಅಧಿಕಾರದಲ್ಲಿ ಇದ್ದರೆ ಚೆನ್ನ ಎಂದರು.
ಕೋಟಿ ರೂ. ಆದಾಯದ ದೇವಸ್ಥಾನಗಳ ಶೇ.೧೦ ಹಣ ಪಡೆದು ಸಣ್ಣ ಪುಟ್ಟ ದೇವಸ್ಥಾನ, ಅರ್ಚಕರ ಶ್ರೇಯೋಭಿವೃದ್ಧಿಗೆ ಬಳಸುತ್ತೇವೆ ಎಂದರೆ ಬಿಜೆಗರು ವಿರೋಧಿಸುತ್ತಿದ್ದಾರೆ. ದೇವಸ್ಥಾನಗಳ ಅಭಿವೃದ್ಧಿ ಬಗ್ಗೆ ವಿರೋಧಿಸಲು ನಾಚಿಕೆ, ಮಾನ ಮರ್ಯಾದೆ ಇದೆಯಾ ಎಂದು ಹರಿಹಾಯ್ದರು.
೧೪೬೦ ಕೋಟಿ ರೂ. ಮೊತ್ತದ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಾಯಿತು. ಬಸವಣ್ಣ ಸಾಂಸ್ಕೃತಿಕ ನಾಯಕ ಘೋಷಣೆ ಹಿನ್ನೆಲೆಯಲ್ಲಿ ಡಾ.ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್ ಅವರನ್ನು ಬಸವಾಭಿಮಾನಿಗಳು ಸನ್ಮಾನಿಸಿದರು.