

ಹಾನಗಲ್ಲ: ತಾಲೂಕಿನ ನರೇಗಲ್ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಮಂಗಳವಾರ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆ ನಡೆಯಿತು. ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಮಲ್ಲಿಕಾರ್ಜುನ ನಿಂಗಪ್ಪ ಅಗಡಿ ಹಾಗೂ ಉಪಾಧ್ಯಕ್ಷರಾಗಿ ಚಂದ್ರಪ್ಪ ಕೂಡಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಹಕಾರಿ ಅಭಿವೃದ್ಧಿ ಅಧಿಕಾರಿ ಬಿ. ಪುಷ್ಪಾವತಿ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
ಬಳಿಕ ನಡೆದ ಅಭಿನಂದನಾ ಸಮಾರಂಭದಲ್ಲಿ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಅಗಡಿ ಮಾತನಾಡಿ, ಸಹಕಾರಿ ಸಂಘದಿಂದ ರೈತರ ಸಮಗ್ರ ಅಭಿವೃದ್ಧಿಗಾಗಿ ಸಾಲಸೌಲಭ್ಯ, ಬಿತ್ತನೆಬೀಜ, ರಸಗೊಬ್ಬರ ಸೇರಿ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು. ಜಿಲ್ಲೆಯಲ್ಲಿ ಮಾದರಿ ಸಹಕಾರಿ ಸಂಘವನ್ನಾಗಿ ಬೆಳೆಸುವುದರೊಂದಿಗೆ ಪಾರದರ್ಶಕ ಆಡಳಿತ ವ್ಯವಸ್ಥೆಗೆ ಎಲ್ಲ ಕ್ರಮ ಕೈಗೊಳ್ಳುತ್ತೇವೆ. ರೈತಸ್ನೇಹಿ ಸಹಕಾರಿ ಸಂಘವನ್ನಾಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದರು.
ಜಿಪಂ ಮಾಜಿ ಸದಸ್ಯ ಮಾಲತೇಶ ಸೊಪ್ಪಿನ, ಬಿಜೆಪಿಯ ನಿಜಲಿಂಗಪ್ಪ ಮುದಿಯಪ್ಪನವರ, ಸೋಮಶೇಖರ ಕೋತಂಬರಿ, ಸಂಘದ ನಿರ್ದೇಶಕರಾದ ಮಂಜುನಾಥ ಕ್ಯಾತಪನವರ, ಚಂದ್ರು ನಾಯ್ಕರ್, ಬಸವರಾಜ ಮಿರ್ಜಿ, ಚನ್ನಬಸಪ್ಪ ಹುಲಿಕಟ್ಟಿ, ಚನ್ನಬಸಪ್ಪ ಉಜ್ಜನಶೆಟ್ಟರ, ಶೇಖಪ್ಪ ಹರಿಜನ, ಗೀತಾ ತಹಸೀಲ್ದಾರ್, ಮಂಗಳಾ ದೇವಸೂರ, ಹಿದಾಯಿತುಲ್ಲಾ ರಾಣೇಬೆನ್ನೂರ, ವಕೀಲ ಶಾಂತಪ್ಪ ಶೀಲವಂತರ, ಬಸಯ್ಯ ಹಿರೇಮಠ, ಗುಡ್ಡಪ್ಪ ಕುರುಬರ, ಗುಡ್ಡಪ್ಪ ಪಾನಿಗಟ್ಟಿ, ಶೇಖಪ್ಪ ಕರಡಿ, ತಿರಕಪ್ಪ ಗೋದಿ, ಬಸವರಾಜ ರ್ಬಾ, ರೇವಣೆಪ್ಪ ರ್ಬಾ, ಫಕೀರೇಶ ಅಗಸಿಬಾಗಿಲ, ಮಲ್ಲಿಕಾರ್ಜುನ ಉಜ್ಜಿನಶೆಟ್ಟರ, ಸೋಮಲಿಂಗ ಸುಳ್ಳಳ್ಳಿ, ಮಂಜುನಾಥ ಸಿರಿಯಮ್ಮನವರ, ಚಾಮರಾಜ ಗೋದಿ, ವೀರಭದ್ರಪ್ಪ ಅಗಡಿ, ಬಸವರಾಜ ಶೀಲವಂತರ, ಶಂಕ್ರಪ್ಪ ದಾನಮ್ಮನವರ, ಖಲಂದರ್ ನೆಗಳೂರ, ಇತರರು ಉಪಸ್ಥಿತರಿದ್ದರು.