ಬಸ್ ಡಿಕ್ಕಿಯಾಗಿ ಸ್ಕೂಟಿ ಸವಾರ ಸ್ಥಳದಲ್ಲೇ ಸಾವು

11 smg 11
Published on

ಶಿವಮೊಗ್ಗ: ಸಾಗರ ರಸ್ತೆಯ ಮಲ್ಲಿಗೇನಹಳ್ಳಿ ಬಳಿ ಶನಿವಾರ ಖಾಸಗಿ ಬಸ್ ಡಿಕ್ಕಿಯಾಗಿ ಸ್ಕೂಟಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಜಾರ್ಖಂಡ್‌ ಮೂಲದ ಕಟ್ಟಡ ಕಾರ್ಮಿಕ ಮುಸ್ಲಿಂ ಅನ್ಸಾರಿ(26) ಮೃತ ಸವಾರ. ಗಾರೆ ಕೆಲಸ ಮಾಡಿಕೊಂಡಿದ್ದ ಅನ್ಸಾರಿ ಆರು ವರ್ಷಗಳ ಹಿಂದೆ ಜಾರ್ಖಂಡ್‌ನಿಂದ ಬಂದಿದ್ದು ಶ್ರೀರಾಮಪುರದಲ್ಲಿ ಬಾಡಿಗೆಗೆ ಮನೆ ಮಾಡಿಕೊಂಡಿದ್ದರು.

ನಾಲ್ಕು ದಿನಗಳ ಹಿಂದಷ್ಟೇ ಕೋಟೆಗಂಗೂರಿಗೆ ಮನೆ ಸ್ಥಳಾಂತರಿಸಿದ್ದರು. ಅದಕ್ಕಾಗಿ ಪತ್ನಿ ಮತ್ತು ಪುಟ್ಟ ಮಕ್ಕಳಿಬ್ಬರನ್ನೂ ಜಾರ್ಖಂಡ್‌ನಿಂದ ಕರೆಯಿಸಿದ್ದರು. ಶಿವಮೊಗ್ಗ ಸೇರಿದಂತೆ ಸುತ್ತಮುತ್ತ ಕೆಲಸ ಮಾಡಿಕೊಂಡಿದ್ದು ಶನಿವಾರ ಮಧ್ಯಾಹ್ನ ಶ್ರೀರಾಂಪುರದಿಂದ ಶಿವಮೊಗ್ಗ ಸಿಟಿಗೆ ಕೆಲಸಕ್ಕೆ ಸ್ಕೂಟಿಯಲ್ಲಿ ಒಬ್ಬರೇ ತೆರಳುವಾಗ ಮಲ್ಲಿಗೆನಹಳ್ಳಿಯ ವಾಜಪೇಯಿ ಬಡಾವಣೆ ಸಮೀಪ ಹಿಂಬದಿಯಿಂದ ಬಸ್ ಡಿಕ್ಕಿ ಹೊಡೆದಿದೆ. ರಸ್ತೆ ಮೇಲೆ ಬಿದ್ದ ಅನ್ಸಾರಿ ಸ್ಥಳದಲ್ಲೇ ಮೃತಪಟ್ಟಿದ್ದು ಸ್ಕೂಟಿಯು ಬಸ್‌ನ ಮುಂಭಾಗದ ಚಕ್ರದಡಿ ಸಿಲುಕಿ ನುಜ್ಜುಗುಜ್ಜಾಗಿದೆ. ಪಶ್ಚಿಮ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net