

ಚಿತ್ರದುರ್ಗ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ಎಸ್‌ಆರ್‌ಬಿಎಂಎಸ್ ರೋಟರಿ ಬಾಲಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ದೇಶ ಭಕ್ತಿ ಗೀತೆಗಳ ಗಾಯನ ಸ್ಪರ್ಧೆಯಲ್ಲಿ ಜ್ಞಾನಭಾರತಿ ಶಾಲೆಯ ವಿದ್ಯಾರ್ಥಿ ಮಲ್ಲೇಶ್‌ಗೆ ಪ್ರಥಮ ಬಹುಮಾನ ಲಭಿಸಿದೆ.
ರೋಟರಿ ಕ್ಲಬ್, ರೋಟರಿ ಕ್ಲಬ್ ಚಿನ್ಮೂಲಾದ್ರಿ ಮತ್ತು ಸೆಲ್ಕೋ ಸೋಲಾರ್ ಸಂಸ್ಥೆಯಿಂದ ಆಯೋಜಿಸಿದ್ದ ಗಾಯನ ಸ್ಪರ್ಧೆಯಲ್ಲಿ 40 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಎಸ್‌ಜೆಎಂ ಶಾಲೆಯ ಸ್ಪೂರ್ತಿ ದ್ವಿತೀಯ, ಡಾನ್‌ಬಾಸ್ಕೋ ಶಾಲೆಯ ಸಾವನ್ಯಾ ತೃತೀಯ, ವಿದ್ಯಾವಿಕಾಸ ವಿದ್ಯಾಸಂಸ್ಥೆಯ ಯಶು, ವಾಸವಿ ವಿದ್ಯಾಸಂಸ್ಥೆಯ ವಿದ್ಯಾ, ಸಂತ ಜೋಸೆಫರ ಕಾನ್ವೆಂಟ್ ಶಾಲೆಯ ನಿಧಿರಾವ್ ಸಮಾಧಾನಕರ ಬಹುಮಾನ ಪಡೆದರು.
ವೀರಶೈವ ಕೋ-ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ ಸಿದ್ಧಾಪುರದ ಶಿವಕುಮಾರ್, ಸೆಲ್ಕೋ ಸೋಲಾರ್ ಸಂಸ್ಥೆಯ ಶಾಖಾ ವ್ಯವಸ್ಥಾಪಕ ಮಂಜುನಾಥ್ ಭಾಗವತ್, ರೋಟರಿ ಕ್ಲಬ್ ಅಧ್ಯಕ್ಷ ಕನಕರಾಜು, ಕಾರ್ಯದರ್ಶಿ ವಿಕ್ರಾಂತ್ ಜೈನ್, ರೋಟರಿ ಕ್ಲಬ್ ಚಿನ್ಮೂಲಾದ್ರಿಯ ಅಧ್ಯಕ್ಷ ಶಂಕರಪ್ಪ, ಜಿಲ್ಲಾ ಗೌರ್ನರ್ ಉಮೇಶ್ ತುಪ್ಪದ್, ಮೂರ್ತಿ, ಗಾಯತ್ರಿ ಶಿವರಾಂ ಇತರರಿದ್ದರು.