ಮಲ್ಲಪ್ಪ ಅಧ್ಯಕ್ಷ, ಉದಯ ಉಪಾಧ್ಯಕ್ಷ

9BRG2
filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (-1.0, -1.0); modeInfo: ; sceneMode: Auto; cct_value: 0; AI_Scene: (-1, -1); aec_lux: 0.0; hist255: 0.0; hist252~255: 0.0; hist0~15: 0.0;
Published on

ಬೋರಗಾಂವ: ಸಮೀಪದ ಮಾಣಕಾಪುರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಮಲ್ಲಪ್ಪ ಹಂಡೆ, ಉಪಾಧ್ಯಕ್ಷರಾಗಿ ಉದಯ ಮಾಳಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಅಮಿತ್ ಶಿಂಧೆ ಘೋಷಿಸಿದರು.

ಸಂಘದಲ್ಲಿ ಈಚೆಗೆ ಜರುಗಿದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಲ್ಲಪ್ಪ ಹಂಡೆ ಹಾಗೂ ನಾಮದೇವ ಬನ್ನೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಉದಯ ಮಾಳಿ ಮತ್ತು ಆನಂದ ಮೋರೆ ಅರ್ಜಿ ಸಲ್ಲಿಸಿದರು.

ಗ್ರಾಪಂ ಅಧ್ಯಕ್ಷ ಸುನೀಲ ಮಾಕಾಳೆ, ಹಿರಿಯ ಮುಖಂಡರಾದ ಧನಂಜಯ ಮಾಳಿ, ಸುರೇಂದ್ರ ಪಾಟೀಲ, ಪ್ರಮೋದ ಮಾಳಿ ಮಾತನಾಡಿದರು. ಉಪಾಧ್ಯಕ್ಷ ಉದಯ ಮಾಳಿ, ಅಮೋಲ ಬನ್ನೆ, ಗಜಾನನ ಅರಗೆ, ಮುಕುಂದ ಕುಲಕರ್ಣಿ, ಸದಾಶಿವ ಅರಗೆ, ನಿರ್ದೇಶಕ ವಿಠ್ಠಲ ಕಟ್ಟೆಕರ, ದತ್ತಾತ್ರೇಯ ಛತ್ರೆ, ಸುನೀಲ ವಾಲಶೆಟ್ಟಿ, ಅಶೋಕ ಮಧಾಳೆ, ಸುಪ್ರಿಯಾ ಕುಟವಾಡೆ, ಅಲ್ಕಾ ಮಾಳಿ, ವಿಠ್ಠಲ ಕುಂಬಾರ, ಸಿಇಒ ಪ್ರದೀಪ ರೂಗೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net