ಮಲ್ಲಮ್ಮಳ ಆದರ್ಶ ಸರ್ವರಿಗೂ ಪ್ರೇರಣೆ

TLK 10-1
ತಾಳಿಕೋಟೆ ಪಟ್ಟಣದ ಶ್ರೀ ಹೇಮರಡ್ಡಿ ಮಲ್ಲಮ್ಮ ಪತ್ತಿನ ಸಹಕಾರಿ ಸಂಘದಲ್ಲಿ ನಡೆದ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮ ನಡೆಯಿತು. ಬಿ.ಎನ್. ಹಿಪ್ಪರಗಿ, ಸಂಘದ ಉಪಾಧ್ಯಕ್ಷ ರವೀಂದ್ರನಾಥ ಪಾಟೀಲ, ವಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್. ಪಾಟೀಲ(ಯಾಳಗಿ) ಇತರರಿದ್ದರು.
Published on

ತಾಳಿಕೋಟೆ: ಹೇಮರಡ್ಡಿ ಮಲ್ಲಮ್ಮ ಸ್ತ್ರೀ ಕುಲದ ಅನರ್ಘ್ಯ ರತ್ನ ಎಂದು ಸಂಘದ ಅಧ್ಯಕ್ಷ ಬಿ.ಎಸ್. ಹಿಪ್ಪರಗಿ ಹೇಳಿದರು.

ಪಟ್ಟಣದ ಶಿವಶರಣೆ ಶ್ರೀ ಹೇಮರಡ್ಡಿ ಮಲ್ಲಮ್ಮ ಪತ್ತಿನ ಸಹಕಾರಿ ಸಂಘದಲ್ಲಿ ಹೇಮರಡ್ಡಿ ಮಲ್ಲಮ್ಮನ 603ನೇ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಹಾರ ಹಾಕಿ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಲ್ಲಮ್ಮ ಕಷ್ಟಗಳನ್ನು ಮೆಟ್ಟಿ ನಿಂತು ಆದರ್ಶ ಗೃಹಿಣಿಯಾಗಿ, ಶ್ರೇಷ್ಠ ಶಿವಶರಣೆಯಾಗಿ ಮಹಿಳಾ ಲೋಕಕ್ಕೆ ಮತ್ತು ಎಲ್ಲ ಸಮಾಜಕ್ಕೆ ಪ್ರಸ್ತುತ ಸಂದರ್ಭದಲ್ಲೂ ಮಾದರಿಯಾಗಿದ್ದಾರೆ. ಅವರಲ್ಲಿರುವ ಪರೋಪಕಾರ, ತ್ಯಾಗ, ಸಂಸ್ಕಾರ, ಗುರು-ಹಿರಿಯರ ಬಗ್ಗೆ ಅಪಾರ ಗೌರವ, ಭಕ್ತಿ, ಸಮಾಜ ಸೇವೆಯಂತಹ ಮುಂತಾದ ಆದರ್ಶ ಮೌಲ್ಯಗಳುಳ್ಳ ಮಹಿಳಾ ಲೋಕದ ಧೃವತಾರೆಯಾಗಿದ್ದಾರೆ. ಅವರ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಸಂಘದ ಉಪಾಧ್ಯಕ್ಷ ರವೀಂದ್ರನಾಥ ಪಾಟೀಲ, ವಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್. ಪಾಟೀಲ(ಯಾಳಗಿ), ಸಂಘದ ನಿರ್ದೇಶಕರಾದ ಪ್ರಭುಗೌಡ ಮದರಕಲ್ಲ, ಎಚ್.ಎಸ್. ಗೂಗಲ್ಲ, ಶರಣಗೌಡ ಇಬ್ರಾಹಿಂಪೂರ, ಶಂಕರಗೌಡ ಮಾಡಗಿ, ಸಿ.ಎಸ್. ಮಾಳಿ, ಸುಭಾಸ ಗುರಡ್ಡಿ, ರಮೇಶ ನಾಯಕ, ಹಾಗೂ ಎಂ.ಜಿ. ಪಾಟೀಲ, ಸಿದ್ದನಗೌಡ ಪಾಟೀಲ(ನಾವದಗಿ), ನಿವೃತ್ತ ತಹಸೀಲ್ದಾರ್ ಜಿ.ಜಿ. ಮದರಕಲ್ಲ, ಸಂಗನಗೌಡ ಅಸ್ಕಿ, ಬಾಪುಗೌಡ ಪಾಟೀಲ, ವ್ಯವಸ್ಥಾಪಕ ಚಂದ್ರಶೇಖರ ಮಾಲಿಪಾಟೀಲ, ಸಿಬ್ಬಂದಿ ವರ್ಗದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net