

ರಾಯಚೂರು: ಹೇಮರಡ್ಡಿ ಮಲ್ಲಮ್ಮ ಅವರ ದೈವಭಕ್ತಿ, ಕಾಯಕ ನಿಷ್ಠೆ, ದಾನ ಧರ್ಮದ ಗುಣ ಪ್ರತಿಯೊಬ್ಬರಿಗೂ ಆದರ್ಶ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಡಾ.ರೇಖಾ ಪಾಟೀಲ್ ಹೇಳಿದರು.
ಇದನ್ನೂ ಓದಿ:ಹೇಮರಡ್ಡಿ ಮಲ್ಲಮ್ಮ ಕಾಯಕ ನಿಷ್ಠೆ ಅನುಸರಿಸಿ
ನಗರದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿವಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹೇಮರಡ್ಡಿ ಮಲ್ಲಮ್ಮ ಜಯಂತಿ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಶ್ರೀಶೈಲ ಮಲ್ಲಿಕಾರ್ಜುನನ್ನು ಸಾಕ್ಷಾತ್ಕರಿಸಿಕೊಂಡ ಹೇಮರಡ್ಡಿ ಮಲ್ಲಮ್ಮನ ಜೀವನ ಮಹಿಳೆಯರಿಗೆ ಪ್ರೇರಣೆ. ಮಲ್ಲಮ್ಮನ ಬದುಕು ವಚನ ಸಂಪುಟ ಇದ್ದಂತೆ ಎಂದರು.
ವಿವಿ ಡೀನ್ ಪ್ರೊ.ಸಿ.ಎಸ್.ಪಾರ್ವತಿ ಮಾತನಾಡಿ, ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಯುವಕರಿಗೆ ಸ್ಫೂರ್ತಿ. ಮಲ್ಲಮ್ಮನ ಭಕ್ತಿ ಹಾಗೂ ನಿಷ್ಟೆಯನ್ನು ಮೆಚ್ಚಿದ ಪರಮಾತ್ಮ ರಡ್ಡಿ ಕುಲಕ್ಕೆ ಬಡತನ ಬಾರದಂತೆ ವರ ನೀಡಿದ್ದಾನೆ. ಜ್ಞಾನಕ್ಕೆ ಒತ್ತು ನೀಡಿ ಪ್ರೀತಿ ಮಮತೆ, ಸಹನೆ, ಹೊಂದಿದ ಉತ್ತಮ ಗೃಹಿಣಿಯಾಗಿದ್ದರು ಎಂದು ತಿಳಿಸಿದರು.
ವಿವಿ ಪ್ರಭಾರ ಕುಲಪತಿ ಡಾ.ಸುಯಮೀಂದ್ರ ಕುಲಕರ್ಣಿ, ಕುಲಸಚಿವ ಡಾ.ವಿ.ಶಂಕರ್, ಪ್ರೊ.ಜ್ಯೋತಿ ದಮ್ಮ ಪ್ರಕಾಶ್, ಉಪಕುಲಸಚಿವ ಡಾ.ಕೆ.ವೆಂಕಟೇಶ್, ಪ್ರೊ.ಪಿ.ಭಾಸ್ಕರ್, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ಜಿ.ಎಸ್.ಬಿರಾದಾರ್, ಪ್ರಮುಖರಾದ ಪಂಪಾಪತಿ, ಸಾವಿತ್ರಿ, ಜಿ.ಶ್ವೇತಾ, ನೇಹಾ ಗಸ್ತಿ, ಕೆ.ಸ್ವಾತಿ ಇತರರಿದ್ದರು.