ಸ್ತ್ರೀ ಕುಲಕ್ಕೆ ಮಾದರಿ ಮಲ್ಲಮ್ಮ

Mallamma is a role model for women
Mallamma is a role model for women
Published on

ಕೆರೂರ: ಹೇಮರಡ್ಡಿ ಮಲ್ಲಮ್ಮ ಅವರ ಆದರ್ಶಗಳು ಮಾನವ ಕುಲಕ್ಕೆ ದಾರಿ ದೀಪವಾಗಿವೆ ಎಂದು ನಿವೃತ್ತ ಶಿಕ್ಷಕ ಡಿ.ಪಿ. ಅಮಲಝರಿ ಹೇಳಿದರು.

ಸಮೀಪದ ಹೂಲಗೇರಿ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮ್ಮಲಮ್ಮ ಅವರ ವ್ಯಕ್ತಿತ್ವ ಹಾಗೂ ಕುಟುಂಬ ನಿರ್ವಹಣೆ ಸ್ತ್ರೀ ಕುಲಕ್ಕೆ ಮಾದರಿ. ಮೇಮನನ್ನು ಮಹಾಯೋಗಿಯನ್ನಾಗಿ ಮಾಡಿದ ಕೀರ್ತಿ ಮಲ್ಲಮ್ಮಳಿಗೆ ಸಲ್ಲುತ್ತದೆ ಎಂದರು.

ಗ್ರಾಮೀಣ ಅಭಿವೃದ್ಧಿ ಸಹಕಾರಿ ಸಂಘದ ಅಧ್ಯಕ್ಷ ಎಲ್.ಆರ್. ಕಕರಡ್ಡಿ ಮಾತನಾಡಿ, ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಎಲ್ಲ ಸಮುದಾಯದರು ಕೂಡಿಕೊಂಡು ಒಗ್ಗಟ್ಟಿನಿಂದ ನಡೆಸಿಕೊಂಡು ಹೋಗುತ್ತೇವೆ ಎಂದರು.

ಗ್ರಾಮದ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ವಿವಿಧ ಪೂಜಾ ಕಾರ್ಯ ನೆರವೇರಿಸಿ ಪ್ರಮುಖ ಬೀದಿಗಳಲ್ಲಿ ಆರತಿ, ಪೂರ್ಣಕುಂಭ, ಕೋಲಾಟದೊಂದಿಗೆ ಹೆಮ್ಮರಡ್ಡಿ ಮಲ್ಲಮ್ಮನ ನೂತನ ಬೆಳ್ಳಿ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಯಿತು.

ದೇವರಡ್ಡಿ ಪಾಟೀಲ, ಪ್ರವೀಣ ಕಕರಡ್ಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸಪ್ಪ ಮುಗಳೊಳ್ಳಿ, ರಾಜು ಕಕರಡ್ಡಿ, ಕುಮಾರ ಕಕರಡ್ಡಿ, ಶಂಕ್ರಪ್ಪ ಹಲಗತ್ತಿ, ಸುರೇಶ ಎಮ್ಮಿ, ಮಲ್ಲಪ್ಪ ಮಲಘಾಣ, ಸಂಜೀವ ಕಕರಡ್ಡಿ, ಹನಮಂತ ದಾಸರಡ್ಡಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net