

ಚಿತ್ರದುರ್ಗ: ಹೊಳಲ್ಕೆರೆ ತಾಲೂಕು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಸ್ಥಾಪಕರಾದ ಯೋಗ ಗುರು ಶ್ರೀ ರಾಘವೇಂದ್ರ ಸ್ವಾಮೀಜಿ ಮತ್ತು ಶ್ರೀ ಸೂರುದಾಸ್‌ಜೀ ಸ್ವಾಮೀಜಿ ಅವರ ಪುಣ್ಯಾರಾಧನೆ ಆ. 1ರಿಂದ 3 ರವರೆಗೆ ಆಶ್ರಮದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಚಿತ್ರದುರ್ಗದ ಶಿವಶರಣ ಶ್ರೀ ಮಾದಾರ ಚನ್ನಯ್ಯ ಗುರುಪೀಠದ ಡಾ. ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಾನ್ನಿಧ್ಯವಹಿಸಲಿದ್ದಾರೆ.
ಆ. 1ರಂದು ಶ್ರೀ ಸೂರುದಾಸ್‌ಜೀ ಸ್ವಾಮೀಜಿ ಅವರ ಪುಣ್ಯಾರಾಧನೆ ಹಾಗೂ ಮಂದಿರದ ಶತರುದ್ರಾಭಿಷೇಕ ನಡೆಯಲಿದೆ. 1 ಮತ್ತು 2ರಂದು ಶ್ರೀ ರಾಘವೇಂದ್ರ ಸ್ವಾಮೀಜಿ ಅವರ ಕೊಡುಗೆ ಕುರಿತಂತೆ ಶಾಲಾ, ಕಾಲೇಜುಗಳಲ್ಲಿ ಭಾಷಣ, ಮತ್ತು ರಾಘವೇಂದ್ರ ಸ್ವಾಮೀಜಿ ರಚಿತ ಭಕ್ತಿಗೀತೆಗಳ ಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ.
2ರಂದು ಬೆಳಗ್ಗೆ 10.30ಕ್ಕೆ ಸ್ವಾಮೀಜಿದ್ವಯರ ಕುರಿತು ನುಡಿನಮನ ಹಾಗೂ ಡಾ. ಮಲ್ಲಿಕಾರ್ಜುನಪ್ಪ ರಚಿಸಿ, ಆಂಗ್ಲಭಾಷೆಗೆ ಅನು ವಾದಿಸಿರುವ ತಿರುಕಯಾನ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. 3ರಂದು ಹೋಮ ಹವನಾದಿಗಳು ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಮೂರು ದಿನಗಳ ಕಾಲ ಜಿಲ್ಲೆಯ ಎಲ್ಲ ತಾಲೂಕುಗಳ ಭಜನಾ ತಂಡಗಳು ಸಂಗೀತ ನಮನ ಸಲ್ಲಿಸಲಿವೆ. ಅನಾಥ ಸೇವಾಶ್ರಮದ ಪ ದಾಧಿಕಾರಿಗಳು ಹಾಗೂ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಆಶ್ರಮದ ಆಡಳಿತಾಧಿಕಾರಿ ಡಾ.ಜಿ. ಪಾಂಡರಂಗಮೂರ್ತಿ ತಿಳಿಸಿದ್ದಾರೆ.