

ಕಲಬುರಗಿ: ಭಾರತೀಯ ಜನತಾ ಪಕ್ಷಕ್ಕಾಗಿ ಶ್ರಮಿಸಿದ್ದೆ. ೨೦೧೮ರ ವಿಧಾನಸಭೆ, ೨೦೧೯ರ ಲೋಕಸಭೆ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಂಚರಿಸಿ, ಪಕ್ಷದ ಗೆಲುವಿಗೆ ಕೆಲಸ ಮಾಡಿದ್ದೆ. ಆದರೆ ನನ್ನ ಕ್ಷೇತ್ರದಲ್ಲಿ ನಿತೀನ್‌ಗೆ ಸೇರ್ಪಡೆ ಮಾಡುವ ಬಗ್ಗೆ ಸೌಜನ್ಯಕ್ಕೂ ಬಿಜೆಪಿ ರಾಜ್ಯ ನಾಯಕರು ಕೇಳದಿರುವುದು ನೋವು ತರಿಸಿದೆ ಎಂದು ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಹೇಳಿದರು.
ನಗರದ ಹೊರವಲಯದ ಖಾಸಗಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಏರ್ಪಡಿಸಿದ್ದ ಹಿತೈಷಿಗಳು, ಅಭಿಮಾನಿಗಳ ಸಭೆಯಲ್ಲಿ ಮಾತನಾಡಿ, ಸಿ.ಟಿ.ರವಿ, ಬಿ.ವೈ.ವಿಜಯೇಂದ್ರ ಎಷ್ಟು ತಗೊಂಡು ಬುಕ್ ಆಗಿದ್ದಾರೋ ಗೊತ್ತಿಲ್ಲ. ಬಿಜೆಪಿಗರು ನನ್ನ ಮನೆ ಒಡೆದರು
ರಿತೇಶ ಗುತ್ತೇದಾರ್ ಮಾತನಾಡಿ,ನಿತಿನ್ ಕಾಕಾ ಅವರಿಗೆ ತಂದೆ ಸ್ಥಾನದಲ್ಲಿ ನಿಂತು ಮಾಲಿಕಯ್ಯ ಬೆಳೆಸಿದರು. ಆದರೆ ಮೋಸ ಮಾಡಿದರು. ಗುತ್ತೇದಾರ್ ಕುಟುಂಬ ಮುಗಿಸಲು ಕೆಲವರು ಸಂಚು ಹೂಡಿದ್ದಾರೆ. ಇದನ್ನು ಬೀಳಿಸಲು ಬಿಡುವುದಿಲ್ಲ ಎಂದರು.
ಬಿಜೆಪಿ ಮುಖಂಡ ಅರುಣಕುಮಾರ ಪಾಟೀಲï ಮಾತನಾಡಿ, ನೋವು, ಅನ್ಯಾಯವಾಗಿದೆ. ಕಪ್ಪು ಚುಕ್ಕೆ ಇಲ್ಲದೇ ಜೀವನ ನಡೆಸಿದ್ದಾರೆ. ರಾಜಕೀಯದಲ್ಲಿ ಭವಿಷ್ಯವಿದ್ದು, ಬಿಜೆಪಿಯಲ್ಲಿ ಮುಂದುವರಿಯಿರಿ ಎಂದು ವಿನಂತಿಸಿದರು. ವಿವಿಧ ಮುಖಂಡರು ಮಾತನಾಡಿ, ತಮ್ಮ ಅಭಿಪ್ರಾಯ ತಿಳಿಸಿದರು.
ಮುಖಂಡ ಸುರೇಶ ಹಲಸಂಗಿ, ಚಿತ್ರಶೇಖರ ಪಾಟೀಲ್, ಗುರುರಾಜ ಯಾಕಾಪುರ, ಸಿz್ದÁರಾಮ ಸಾಲಿ, ಹಿರಿಯ ಶಿP್ಷÀಕ ಬಸವಂತರಾವ, ಕಲ್ಯಾಣರಾವ ಪಾಟೀಲï ಮಳಖೇಡ, ವಿದ್ಯಾಧರ ಮಂಗಳೂರೆ, ಶೈಲೇಶ ಗುಣಾರಿ, ಸಾವಿರಪ್ಪ ಪೂಜಾರಿ, ಅರವಿಂದ ಗುತ್ತೇದಾರ್, ಶಿವು ಪ್ಯಾಟಿ ಇತರರಿದ್ದರು.
ನಿತಿನ್ ಮೋಸ ಮಾಡಿದ: ಕಪ್ಪು ಚುಕ್ಕೆ ಇಲ್ಲದೆ ರಾಜಕಾರಣ ಮಾಡಿz್ದೆÃನೆ. ಸತತ ೧೭ ವರ್ಷ ಕಾಂಗ್ರೆಸ್‌ನಲ್ಲಿ ವನವಾಸ ಅನುಭವಿಸಿz್ದÉÃನೆ. ಮಕ್ಕಳನ್ನು ಬೆಳೆಸದೆ ತಮ್ಮನಿಗೆ ಅಧಿಕಾರ ಕೊಟ್ಟೆ. ಆದರೆ ನಿತಿನ್ ೨೦೧೮ರ ಚುನಾವಣೆಯಲ್ಲಿ ಒಳಗೆ ಇದ್ದು, ಚೂರಿ ಹಾಕಿದ. ೨೦೨೩ರಲ್ಲಿ ಕೆಲ ಬಿಜೆಪಿಗರೇ ನಮ್ಮ ಮನೆ ಒಡೆದರು. ಎಂಎಲ್‌ಎ ಆದರೆ ಮಿನಿಸ್ಟರ್ ಆಗ್ತಾನೆ ಅಂತ ಬೆಂಬಲಕ್ಕೆ ನಿಲ್ಲಲಿಲ್ಲ. ಅವನನ್ನು ಆರು ವರ್ಷ ಉಚ್ಛಾಟನೆ ಮಾಡಲಾಗಿತ್ತು. ಆದರೆ ಜಿಲ್ಲಾ ನಾಯಕರೊಂದಿಗೆ ಚರ್ಚಿಸದೆ ಸೇರ್ಪಡೆ ಮಾಡಿದ್ದಾರೆ ಎಂದು ಮಾಲಿಕಯ್ಯ ಬೇಸರ ವ್ಯಕ್ತಪಡಿಸಿದರು.
ಪಕ್ಷ ಹಾಳು ಮಾಡುತ್ತಿರುವ ವಿಜಯೇಂದ್ರ: ಒಂದು ಕಾಲದಲ್ಲಿ ಆರ್‌ಎಸ್‌ಎಸ್ ಪ್ರಚಾರಕರು, ಸಂಘಟನಾ ಕಾರ್ಯಕರ್ತರು ಚಾಪೆ ಮೇಲೆ ಮಲಗಿ ಸಂಘಟಿಸುತ್ತಿದ್ದರು. ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ, ಅರುಣ ಬಿನ್ನಾಡಿ ವಿಜಯೇಂದ್ರ ಕೈಗೊಂಬೆಯಾಗಿದ್ದಾರೆ. ಅವರ ಆಸ್ತಿ ಪಾಸ್ತಿ ನೋಡಿದರೆ ತಿಳಿಯುತ್ತೆ. ಸಿಟಿ ರವಿ, ವಿಜಯೇಂದ್ರ ಪಕ್ಷ ಹಾಳು ಮಾಡುತ್ತಿದ್ದಾರೆ ಎಂದು ಗುತ್ತೇದಾರ್ ಕಿಡಿ ಕಾರಿದರು.
19ರಂದು ನಿರ್ಧಾರ: ಈಶ್ವರಪ್ಪ, ಕರಡಿ ಸಂಗಣ್ಣ, ಪ್ರತಾಪ ಸಿಂಹ ಟಿಕೆಟ್ ತಪ್ಪಿಸಿದ್ದಾರೆ. ಲಕ್ಷö್ಮಣ ಸವದಿಯನ್ನು ದೂರ ತಳ್ಳಿದರು. ವಿಜಯೇಂದ್ರ, ಯಡಿಯೂರಪ್ಪ ಸ್ವಾರ್ಥ ರಾಜಕಾರಣ ಮಾಡುತ್ತಿದ್ದಾರೆ. ನಾನು ನಿತಿನ್ ಸೇರ್ಪಡೆಗೆ ವಿರೋಧಿಸಿದ್ದೆ. ಮನವರಿಕೆ ಮಾಡಲು ಅವಕಾಶವಿತ್ತು. ಅನ್ಯಾಯ ಮಾಡಿದರು. ೧೯ರಂದು ನಿರ್ಧಾರ ತಿಳಿಸುತ್ತೇನೆ ಎಂದರು.