ದುರುದ್ದೇಶಪೂರ್ವಕವಾಗಿ ಆರ್‌ಎಂಎಂ ಮೇಲೆ ದಾಳಿ

6 hos protest
ಸುದ್ದಿಗೋಷ್ಠಿ ಉದ್ದೇಶಿಸಿ ವಿದ್ಯಾಧರ್ ಮಾತನಾಡಿದರು.
Published on

ಹೊಸನಗರ: ಹಿಂದೆಯೇ ಹಲವು ದಾಳಿ ನಡೆಸಿದ್ದು ಅದರಿಂದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಆರೋಪ ಮುಕ್ತರಾಗಿದ್ದರೂ ದುರುದ್ದೇಶಪೂರ್ವಕವಾಗಿ ಮತ್ತೆ ಇಡಿ ದಾಳಿ ನಡೆಸಲಾಗಿದೆ ಎಂದು ಶಿಮುಲ್ ನಿರ್ದೇಶಕ ವಿದ್ಯಾಧರ್ ಆರೋಪಿಸಿದ್ದಾರೆ.

ಆರ್.ಎಂ.ಮಂಜುನಾಥಗೌಡ ಮತ್ತೆ ಕಾನೂನು ಬದ್ಧವಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದಾರೆ. ಸದ್ಯದಲ್ಲೇ ಅಪೆಕ್ಸೃ್ ಬ್ಯಾಂಕ್ ಅಧ್ಯಕ್ಷರಾಗುವ ಅರ್ಹತೆಯೂ ಇದೆ. ಆದರೆ ಅವರ ಏಳಿಗೆಯನ್ನು ಸಹಿಸದ ವಿರೋಧ ಪಕ್ಷಗಳ ಪಿತೂರಿಯಿಂದ ದಾಳಿ ನಡೆಸಿ ಹೆದರಿಸುವ ಕೆಲಸ ಮಾಡಲಾಗುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ತುಂಗಾ ಅಡಕೆ ಮಂಡಿ ಅಧ್ಯಕ್ಷ ದುಮ್ಮ ವಿನಯಕುಮಾರ್ ಮಾತನಾಡಿ, ಎಷ್ಟೇ ದಾಳಿ ನಡೆದರೂ ಗೌಡ್ರು ಜಗ್ಗುವುದಿಲ್ಲ, ಬಗ್ಗುವುದಿಲ್ಲ. ಈಗಾಗಲೇ ಡಿಸಿಸಿ ಬ್ಯಾಂಕ್‌ನ ಯಾವುದೇ ಪ್ರಕರಣದಲ್ಲಿ ಅವರ ಪಾತ್ರವಿಲ್ಲ ಎಂಬುದು ಗೊತ್ತಾಗಿದೆ. ಒಬ್ಬ ವ್ಯಕ್ತಿಯನ್ನು ರಾಜಕೀಯವಾಗಿ ಮುಗಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್ ಮಾತನಾಡಿ, ಸದ್ಯದಲ್ಲೇ ಹೊಸನಗರದಲ್ಲಿ ಆರ್‌ಎಂಎಂ ಪರವಾಗಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು. ತಾಪಂ ಮಾಜಿ ಸದಸ್ಯ ಎರಗಿ ಉಮೇಶ್, ಸಹಕಾರಿಗಳಾದ ಗುಬ್ಬಿಗ ರವಿ, ಲೇಖನಮೂರ್ತಿ, ವಿನಾಯಕ ಚಕ್ಕಾರು, ಜಯನಗರ ಗುರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net