

ಕುಶಾಲನಗರ:
ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಸೋಮವಾರ ಇಲ್ಲಿನ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಲೇರಿಯಾ, ಡೆಂಘಿ ಜ್ವರ ಹಾಗೂ ಕೋವಿಡ್ ಸಂಕ್ರಾಮಿಕ ರೋಗಗಳು ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ನೀಡಲಾಯಿತು.
ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕ ಚಂದ್ರಶೇಖರ್ ವಿದ್ಯಾರ್ಥಿಗಳಿಗೆ ಮಲೇರಿಯಾ ಮತ್ತು ಡೆಂಘಿ ಜ್ವರದ ಹರಡುವಿಕೆ ಲಕ್ಷಣಗಳು, ಅದಕ್ಕೆ ಸಂಬAಧಿಸಿದ ಚಿಕಿತ್ಸೆ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು, ಶಾಲೆಯ ಶುಶ್ರೂಷಾಧಿಕಾರಿ ಮೀನಾ ಮಾತಾಡಿ ವಿದ್ಯಾರ್ಥಿಗಳು ವೈಯಕ್ತಿಕ ಶುಚಿತ್ವ ಕಾಪಾಡಿಕೊಳ್ಳುವುದರಿಂದ ಉತ್ತಮ ಆರೋಗ್ಯವನ್ನು ಹೊಂದಬಹುದು, ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದರಿಂದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು ಹಾಗೂ ಶಾಲಾ ಪರಿಸರದ ಶುಚಿತ್ವವನ್ನು ಕಾಪಾಡುವುದು ವಿದ್ಯಾರ್ಥಿಗಳ ಜವಾಬ್ದಾರಿ ಎಂದು ಹೇಳಿದರು.
ಆಶಾ ಕಾರ್ಯಕರ್ತೆ ಪ್ರಿಯಾ, ಶಿಕ್ಷಕರಾದ ಮಂಜು, ನಾಗೇಂದ್ರ, ಹರಿಣಾಕ್ಷಿ, ತ್ರಿವೇಣಿ, ಅಶ್ವತಿ ಇದ್ದರು.