ಅದ್ದೂರಿ ತೆಪ್ಪೋತ್ಸವಕ್ಕೆ ಅಗತ್ಯ ಸಹಕಾರ

Malebennur
Published on

ಮಲೇಬೆನ್ನೂರು: ಕೊಮಾರನಹಳ್ಳಿ ಲಕ್ಷ್ಮೀರಂಗನಾಥ ದೇವಾಲಯದ ಕೆರೆ ಕೋಡಿ ಬಿದ್ದಿರುವುದರಿಂದ ಅದ್ದೂರಿಯಾಗಿ ತೆಪ್ಪೋತ್ಸವ ಆಚರಿಸಲು ಅಗತ್ಯ ಸಹಕಾರ ನೀಡಲಾಗುವುದು ಎಂದು ಶಾಸಕ ಬಿ.ಪಿ. ಹರೀಶ್ ಭರವಸೆ ನೀಡಿದರು.

ಸಮೀಪದ ಕೊಮಾರನಹಳ್ಳಿ ಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಸೋಮವಾರ ಬಾಗಿನ ಅರ್ಪಿಸಿ ಮಾತನಾಡಿ, ಕಳೆದ ಕೆಲವು ದಿನಗಳಿಂದ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಕೆರೆ, ಕಟ್ಟೆಗಳು ಭರ್ತಿಯಾಗಿವೆ ಎಂದರು.

ಕಾಂಗ್ರೆಸ್ ಶಾಸಕ ರಾಜು ಕಾಗೆ ಸರ್ಕಾರದ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ರಾಜ್ಯದ ಪರಿಸ್ಥಿತಿ ಬಿಚ್ಚಿಟ್ಟಿದ್ದಾರೆ. ಈ ಸರ್ಕಾರ ದಿವಾಳಿಯಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದು ಗ್ಯಾರಂಟಿ ಎಂದು ಟೀಕಿಸಿದರು.

ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಅನುದಾನ ಇಲ್ಲದೇ ರಸ್ತೆಗಳಲ್ಲಿ ಬಿದ್ದ ಗುಂಡಿ ಮುಚ್ಚಲಾಗುತ್ತಿಲ್ಲ. ಸಾರಿಗೆ ಸಂಸ್ಥೆ ಬಸ್‌ಗಳ ಸ್ಥಿತಿ ಕೆಟ್ಟುಹೋಗಿದೆ. ಅತಿವೃಷ್ಟಿಗೂ ಪರಿಹಾರ ಸಿಗುವ ಭರವಸೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇವಾಲಯದ ಆಡಳಿತಾಧಿಕಾರಿ ಆರ್.ರವಿ, ಅರ್ಚಕ ಗುರುರಾಜಾಚಾರ್, ಬಿಜೆಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಐರಣಿ ಅಣ್ಣೇಶ್ ಮತ್ತು ರಶ್ಮಿ ದಂಪತಿ, ತಹಸೀಲ್ದಾರ್ ಗುರುಬಸವರಾಜ್, ಉಪ ತಹಸೀಲ್ದಾರ್ ರವಿ, ಕಂದಾಯ ನಿರೀಕ್ಷಕ ಆನಂದ್, ಶಾನುಭೋಗ್ ಧರ್ಮರಾಜ್, ಬಿಜೆಪಿ ಮುಖಂಡ ಹನಗವಾಡಿ ವೀರೇಶ್, ಬಿಜೆಪಿ ಗ್ರಾಮಾಂತರ ಘಟಕದ ಅಧ್ಯಕ್ಷ ಎಚ್. ಲಿಂಗರಾಜ್, ಜಿ.ಸುನಿಲ್, ಡಿ.ಬಸಪ್ಪಗೌಡ, ರಾಮಚಂದ್ರಾಚಾರ್, ಐರಣಿ ಮಹೇಶ್, ಮೂರ್ತಿ, ಡಿ. ಹನುಮಂತಪ್ಪ, ಹುಗ್ಗಿ ರಂಗಣ, ರಾಜ ನಾಯ್ಕ, ಜಿ.ಪಿ. ಹನುಮಗೌಡ, ರಮಣ ಸ್ವಾಮಿ, ಚಿಕ್ಕಣ್ಣ, ಹನುಮಂತ ಗೌಡ, ಮೋಹನ್ ಕುಮಾರ್, ಸಂತೋಷ್, ಪಿಗ್ನಿ ರಾಮಣ್ಣ, ಎಸ್. ಕೃಷ್ಣಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net