

ದೇವದುರ್ಗ: ಗ್ರಾಮೀಣ ಜನ ಗುಳೆ ಹೋಗುವುದನ್ನು ತಪ್ಪಿಸಿ ಊರಲ್ಲಿ ಕೆಲಸ ನೀಡಲು ನರೇಗಾ ಯೋಜನೆ ಜಾರಿಗೊಳಿಸಲಾಗಿದೆ. ಕೆಲಸ ಮಾಡುವ ಕೂಲಿಕಾರರ ವೇತನ 370ರೂ.ಗೆ ಹೆಚ್ಚಿಸಲಾಗಿದೆ ಎಂದು ತಾಪಂ ಕಾರ್ಯದರ್ಶಿ ರವಿಚಂದ್ರ ಹೇಳಿದರು.
ತಾಲೂಕಿನ ರಾಮದುರ್ಗ ಕೆರೆಯಲ್ಲಿ ಕೈಗೊಂಡ ನರೇಗಾ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿನೀಡಿ ಶನಿವಾರ ಮಾತನಾಡಿದರು. ನರೇಗಾ ಕಾಮಗಾರಿ ಎಲ್ಲರಿಗೂ ಸ್ವಾವಲಂಬಿ ಜೀವನ ಶಕ್ತಿ ನೀಡಲಿದೆ.
ಗ್ರಾಮೀಣ ಭಾಗದ ಜನರಿಗೆ ಯೋಜನೆ ಸಹಾಯಕವಾಗಿದೆ. ಏ.1ರಿಂದ ಕೂಲಿ 370 ರೂ. ಹೆಚ್ಚಳವಾಗಿದ್ದು ಗಂಡು ಹೆಣ್ಣಿಗೆ ಸಮಾನ ಕೂಲಿ ನೀಡಲಾಗುತ್ತದೆ.
ಕೂಲಿಕಾರರು ನಗರಗಳಿಗೆ ಗುಳೆ ಹೋಗದೆ ನಿಮ್ಮೂರಿನಲ್ಲೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಬೇಕು. ಯೋಜನೆಯಡಿ 65ವಷರ್ ಮೇಲ್ಪಟ್ಟ ವೃದ್ಧರಿಗೆ, ಅಂಗವಿಕಲರಿಗೆ ಹಾಗೂ ಗರ್ಭಿಣಿಯರಿಗೆ ಶೇ.50 ಕೆಲಸ ಮಾಡಿದರೂ ಪೂರ್ತಿ ಪ್ರಮಾಣದ ಕೂಲಿ ನೀಡಲಾಗುವುದು. ಎನ್‌ಎಂಎಂಎಸ್ ಹಾಜರಾತಿ ಕಡ್ಡಾಯವಾಗಿದೆ. ಗ್ರಾಮೀಣ ಭಾಗದ ಜನರು ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.