ಮಲ್ದಾರೆಯ ಪ್ಲೇ ಬಾಯ್ಸ ತಂಡಕ್ಕೆ ಪ್ರಶಸ್ತಿ

19 vpt 3
ಸ್ಪರ್ಧಿಗಳಿಗೆ ಶುಭಾಶಯ ಕೊರುತ್ತಿರುವ ಅತಿಥಿಗಳು ಹಾಗೂ ಆಯೋಜಕರು.
Published on

ವಿರಾಜಪೇಟೆ: ಸಮೀಪದ ಹೆಗ್ಗಳ ಗ್ರಾಮದ ತಂಬುರಾನ್ ಫ್ರೆಂಡ್ಸ್ ವತಿಯಿಂದ ಮೂರು ದಿನಗಳ ಕಾಲ ಗ್ರಾಮಾಂತರ ಮಟ್ಟದ ಸೂಪರ್ 9 ಟೆನಿಸ್‌ಬಾಲ್ ಕ್ರಿಕೆಟ್ ಪಂದ್ಯಾಟವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು. ಅಂತಿಮ ಪಂದ್ಯಾಟದಲ್ಲಿ ನೆಲ್ಲಿ ಊದಿಕೇರಿಯ ಗ್ಯಾಲಕ್ಸಿ ತಂಡವನ್ನು ಮಲ್ದಾರೆಯ ಪ್ಲೇ ಬಾಯ್ಸ ತಂಡ ಮಣಿಸಿ ನಗದು ಹಾಗೂ ಪ್ರಶಸ್ತಿ ತನ್ನದಾಗಿಸಿಕೊಂಡಿತು.

ಪಂದ್ಯಾಟದ ಸರಣಿ ಶ್ರೇಷ್ಠ ಪ್ರಶಸ್ತಿ ಹಾಗೂ ಸೈಕಲ್ ಅನ್ನು ಮಲ್ದಾರೆ ತಂಡದ ರಿಯಾಜ್ ಪಡೆದುಕೊಂಡರು. ಪಂದ್ಯಾಟದ ಪ್ರಯುಕ್ತ ಮೈಸೂರಿನ ಮಣಿಪಾಲ್ ಆಸ್ಪತ್ರೆ ಸಹಯೋಗದೊಂದಿಗೆ ಆರೋಗ್ಯ ಉಚಿತ ತಪಾಸಣಾ ಶಿಬಿರ ಹಾಗೂ ಜಿಲ್ಲಾ ಮಡಿಕೇರಿ ಜಿಲ್ಲಾ ಆಸ್ಪತ್ರೆಯ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಯಿತು.

ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಹಾಗೂ ಸಮಾಜ ಸೇವಕರಿಗೆ ಸನ್ಮಾನ ಮಾಡಲಾಯಿತು. ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net