ಪೆಹಲ್ಗಾಮ್ ಘಟನೆಗೆ ಜಿಲ್ಲಾ ಹಿಂದೂ ಮಲಯಳಿ ಸಮಾಜ ಖಂಡನೆ

malayali
Published on

ಕುಶಾಲನಗರ:

ಜಮ್ಮು ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಅಮಾಯಕ ಹಾಗೂ ಮುಗ್ಧ ಪ್ರವಾಸಿಗರನ್ನು ಪೈಶಾಚಿಕವಾಗಿ ಭಯೋತ್ಪಾದಕ ದಾಳಿಯ ಮೂಲಕ ಹತ್ಯೆಗೈದ ಘಟನೆಯನ್ನು ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಪದಾಧಿಕಾರಿಗಳು ತೀವ್ರವಾಗಿ ಖಂಡಿಸಿದರು. ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಭಾನುವಾರ ಸಭೆ ನಡೆಸಿದ ಸಮಾಜದ ಪದಾಧಿಕಾರಿಗಳು, ಭಯೋತ್ಪಾದಕ ದಾಳಿಯಿಂದ ಮಡಿದ ನತದೃಷ್ಟ ಅಮಾಯಕರ ಆತ್ಮಕ್ಕೆ ಮೌನಚಾರಣೆ ಮೂಲಕ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಹಿಂದೂ ಮಲಯಾಳಿ ಸಮಾಜದ ಜಿಲ್ಲಾಧ್ಯಕ್ಷ ವಿ.ಎಂ. ವಿಜಯ್ ಮಾತನಾಡಿ ಕಾಶ್ಮೀರದಲ್ಲಿ ನಡೆದ ಹೇಯ ಕೃತ್ಯವನ್ನು ನಮ್ಮ ಸಮಾಜ ಬಲವಾಗಿ ಖಂಡಿಸಿದ್ದು, ಅಮಾಯಕ ಪ್ರವಾಸಿಗರನ್ನು ಅವರ ಮಕ್ಕಳು, ಪತ್ನಿಯ ಮುಂದೆ ನಡೆಸಿದ ಈ ಕೃತ್ಯ ದೊಡ್ಡ ಕ್ರೌರ್ಯವಾಗಿದೆ .ಈ ಕೃತ್ಯ ನಡೆಸಿದ ದುಷ್ಟರಿಗೆ ತಕ್ಕ ಪಾಠ ಕಲಿಸಬೇಕು. ಪ್ರತಿಯೊಬ್ಬ ಭಾರತೀಯರು ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡುವ ಮೂಲಕ ಭಯೋತ್ಪಾದಕರ ನಿರ್ನಾಮಕ್ಕೆ ನಾಂದಿ ಹಾಡಲು ಸ್ಫೂರ್ತಿ ಆಗಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಟಿ.ಕೆ. ಸುಧೀರ್, ಪ್ರಧಾನ ಕಾರ್ಯದರ್ಶಿ ಎನ್.ವಿ. ಉಣ್ಣಿಕೃಷ್ಣನ್, ಖಜಾಂಚಿ ಕೆ.ಬಾಬು, ಗೌರವ ಸಲಹೆಗಾರ ಟಿ.ಆರ್. ವಾಸುದೇವ್, ಸೋಮವಾರಪೇಟೆ ತಾಲೂಕು ಉಪಾಧ್ಯಕ್ಷ ಅಜೀಶ್ ಕುಮಾರ್ ಜಿಲ್ಲಾ ಪದಾಧಿಕಾರಿಗಳು ಹಾಗೂ ತಾಲೂಕು ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net