ಮಾಲವಿ ಜಲಾಶಯದ ಕಾಲುವೆ ಸ್ವಚ್ಛತೆ

hb canal
ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಜಲಾಶಯದ ಕಾಲುವೆಗಳ ಸ್ವಚ್ಛತಾ ಕಾರ್ಯ ನಡೆದಿರುವುದು.
Published on

ಹಗರಿಬೊಮ್ಮನಹಳ್ಳಿ: ತಾಲೂಕಿನ ಮಾಲವಿ ಜಲಾಶಯ ಭರ್ತಿಯಾಗಿದ್ದು, ಹಗರಿಹಳ್ಳಕ್ಕೆ ವ್ಯರ್ಥವಾಗಿ ಹರಿವ ನೀರನ್ನು ಸದ್ಬಳಕೆಗಾಗಿ ಜಲಾಶಯದ ಎಡ ಮತ್ತು ಬಲದಂಡೆ ಕಾಲುವೆಗಳ ಸ್ವಚ್ಛತೆ ಕಾರ್ಯಕ್ಕೆ ಬುಧವಾರ ಚಾಲನೆ ನೀಡಲಾಗಿದೆ.

ಶಾಸಕ ಕೆ.ನೇಮಿರಾಜ್ ನಾಯ್ಕ ಮಾತನಾಡಿ, ಮಾಲವಿ ಜಲಾಶಯದಿಂದ ಹಗರಿಹಳ್ಳಕ್ಕೆ ನೀರು ಹರಿಸಿದರೆ, ಅದು ತುಂಗಭದ್ರಾ ನದಿ ಸೇರಿ ವ್ಯರ್ಥವಾಗುತ್ತದೆ. ಆದ್ದರಿಂದ ತಾಲೂಕಿನ ಕಾತ್ಯಾಯಿನಿಮರಡಿ ಹಾಗೂ ಕೆ.ಓಬಳಾಪುರದ ರೈತರ ಒತ್ತಾಸೆ ಮೇರೆಗೆ ಎಡದಂಡೆ ಕಾಲುವೆ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. ಕಾಲುವೆಗಳಿಗೆ ನೀರು ಹರಿಸಿದರೆ ರೈತರ ಪಂಪ್‌ಸೆಟ್‌ಗಳ ಅಂತರ್ಜಲ ಹೆಚ್ಚಳವಾಗಲಿದೆ ಎಂದರು.

ತಂಬ್ರಹಳ್ಳಿ ರಸ್ತೆಯ ಬಯಲು ಆಂಜನೇಯ ಸ್ವಾಮಿ ದೇವಸ್ಥಾನದಿಂದ ಆರಂಭವಾಗಿರುವ ಕೆಲಸ ಜಲಾಶಯದ ಎಡದಂಡೆ ಕಾಲುವೆ ಸಂಪೂರ್ಣ ಸ್ವಚ್ಛತಾ ಕಾರ್ಯ ನಡೆಯಲಿದೆ. ಪ್ರಮುಖರಾದ ಕಿನ್ನಾಳ್ ಸುಭಾಷ್, ಚಿತ್ತವಾಡ್ಗಿ ಪ್ರಕಾಶ್, ಐನಳ್ಳಿ ಸೋಮಶೇಖರ್, ಬಾಬುವಲಿ, ರುದ್ರೇಶ, ಮಲ್ಲಿಕಾರ್ಜುನ, ಕಾತ್ಯಾಯಿನಿಮರಡಿ ಮತ್ತು ಕೆ.ಓಬಳಾಪುರ ರೈತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net