ಮಳವಳ್ಳಿ ತಾಲೂಕಿಗೆ ನಾಲ್ಕನೇ ಸ್ಥಾನ

3 mlv 1
ಮಳವಳ್ಳಿ ತಾಲೂಕಿನ ವಿವಿಧ ಶಾಲೆಗಳಲ್ಲಿ ಎಸ್‌ಎಸ್‌ಎಲ್ ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಜುಬೀಯ ಖಾನಂ 623, ಕೆ.ಭುವನಾ 622, ಕೆ.ಸಿ.ನಿಸರ್ಗ 622 ಹಾಗೂ 621 ಅಂಕ ಪಡೆದ ಎಂ.ಎನ್.ದೀಪಿಕಾ ಅವರನ್ನು ಶನಿವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸನ್ಮಾನಿಸಿದರು. ತಹಸೀಲ್ದಾರ್ ಡಾ.ಲೋಕೇಶ್, ಇಒ ಶ್ರೀನಿವಾಸ್, ಬಿಇಒ ಉಮಾ ಇದ್ದರು.
Published on

ಮಳವಳ್ಳಿ: ತಾಲೂಕಿನ ಸರ್ಕಾರಿ ಮತ್ತು ಸರ್ಕಾರೇತರ ಶಾಲೆಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ 2,144 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ತಾಲೂಕಿಗೆ ಶೇ.68.59ರಷ್ಟು ಫಲಿತಾಂಶ ಬಂದಿದ್ದು, ಜಿಲ್ಲೆ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.

ತಾಲೂಕಿನ 75 ಪ್ರೌಢಶಾಲೆಗಳಿಂದ 3126 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರ ಪೈಕಿ 2144 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಪಟ್ಟಣ ಹೊರವಲಯದ ಮಾರೇಹಳ್ಳಿ ಬಳಿಯ ಆದರ್ಶ ವಿದ್ಯಾಲಯ ವಿದ್ಯಾರ್ಥಿನಿ ಜುಬೀಯಾ ಖಾನಂ 625ಕ್ಕೆ 623 ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದು, ಇದೇ ಶಾಲೆಯ ಎಂ. ಎನ್.ದೀಪಿಕಾ 621, ಕಿರುಗಾವಲಿನ ಆದರ್ಶ ಪ್ರೌಢಶಾಲೆ ವಿದ್ಯಾರ್ಥಿನಿ ಕೆ.ಭುವನಾ 622, ಜ್ಞಾನಗಂಗಾ ಎಜುಕೇಷನ್ ಟ್ರಸ್ಟ್ ಶಾಲೆಯ ಕೆ.ಸಿ.ನಿಸರ್ಗ 622 ಅಂಕ ಗಳಿಸಿದ್ದಾರೆ.

ಕಿರುಗಾವಲಿನ ಜ್ಞಾನಗಂಗಾ ಎಜುಕೇಷನ್ ಟ್ರಸ್ಟ್ ಶಾಲೆ ಹಾಗೂ ಹಲಗೂರಿನ ಮುರಾರ್ಜಿ ದೇಸಾಯಿ ವಸತಿ ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದಿವೆ.

ತಾಲೂಕಿನ 51 ವಿದ್ಯಾರ್ಥಿಗಳು 600 ಕ್ಕೂ ಅಧಿಕ ಅಂಕ ಪಡೆದಿದ್ದಾರೆ. ಸರ್ಕಾರಿ ಶಾಲೆಗಳು ಶೇ 70.06, ಅನುದಾನ ರಹಿತ ಶಾಲೆಗಳು ಶೇ.80.45 ಹಾಗೂ ಅನುದಾನಿತ ಶಾಲೆಗಳು ಶೇ.55.13ರಷ್ಟು ಫಲಿತಾಂಶ ಪಡೆದಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಈ. ಉಮಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net