ಮಳವಳ್ಳಿಯ ವಿವಿಧೆಡೆ ಶ್ರಮದಾನ

1 mlv 2
ಮಳವಳ್ಳಿ ತಾಲೂಕಿನ ಮಾರೇಹಳ್ಳಿ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ಭಾನುವಾರ ನಾಗೇಗೌಡನದೊಡ್ಡಿ ಗ್ರಾಪಂ ಆಡಳಿತದ ವತಿಯಿಂದ ನೂರಕ್ಕೂ ಹೆಚ್ಚು ನರೇಗಾ ಕೂಲಿ ಕಾರ್ಮಿಕರು ಶ್ರಮದಾನ ಮಾಡುವ ಮೂಲಕ ಜಾಗೃತಿ ಮೂಡಿಸಿದರು. ಗ್ರಾಪಂ ಸದಸ್ಯ ಮಹದೇವು, ಪಿಡಿಒ ಮಹೇಶ್ ಇದ್ದರು.
Published on

ಮಳವಳ್ಳಿ: ಪಟ್ಟಣದ ಪುರಸಭೆ, ತಾಲೂಕು ಆಡಳಿತ ಹಾಗೂ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸ್ವಚ್ಛ ಭಾರತ ಅಭಿಯಾನದಡಿ ಭಾನುವಾರ ಶ್ರಮದಾನ ಮಾಡಲಾಯಿತು.

ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಗ್ರೇಡ್ 2 ತಹಸೀಲ್ದಾರ್ ಬಿ.ವಿ.ಕುಮಾರ್ ನೇತೃತ್ವದಲ್ಲಿ ತಾಲೂಕು ಪಂಚಾಯಿತಿ ಮತ್ತು ಪುರಸಭೆ ಕಚೇರಿ ಸುತ್ತಲೂ ಸಿಬ್ಬಂದಿ ಸ್ವಚ್ಛತಾ ಕಾರ್ಯ ನಡೆಸಿದರು. ನಾಗೇಗೌಡನದೊಡ್ಡಿ ಗ್ರಾಮ ಪಂಚಾಯಿತಿ ವತಿಯಿಂದ ಇತಿಹಾಸ ಪ್ರಸಿದ್ಧ ಮಾರೇಹಳ್ಳಿ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಸುತ್ತಲಿನ ಪ್ರದೇಶದಲ್ಲಿ ಸುಮಾರು ನೂರಕ್ಕೂ ಹೆಚ್ಚು ನರೇಗಾ ಕೂಲಿ ಕಾರ್ಮಿಕರು ಸ್ವಚ್ಛತಾ ಕಾರ್ಯ ನಡೆಸಿದರು. ಗ್ರಾಪಂ ಸದಸ್ಯ ಮಹದೇವು, ಪಿಡಿಒ ಮಹೇಶ್ ಹಾಜರಿದ್ದರು.

ರಾಗಿಬೊಮ್ಮನಹಳ್ಳಿ ಗ್ರಾಪಂ ಆಡಳಿತದವರು ಗ್ರಾಮದ ಹೊರವಲಯದಲ್ಲಿರುವ ಕುರುಬನಕಟ್ಟೆ ಏರಿಯನ್ನು ಸ್ವಚ್ಛಗೊಳಿಸುವ ಮೂಲಕ ಶ್ರಮದಾನ ಮಾಡಿದರು. ಸದಸ್ಯ ಆರ್.ಬಿ.ಮಹದೇವಸ್ವಾಮಿ, ಪಿಡಿಒ ಈರಣ್ಣಯ್ಯ, ಕಾರ್ಯದರ್ಶಿ ಚಲುವರಾಜು, ಬಿಲ್ ಕಲೆಕ್ಟರ್ ಕಾಳೇಗೌಡ, ಕಂಪ್ಯೂಟರ್ ಆಪರೇಟರ್ ನಾಗೇಂದ್ರ, ನೀರುಗಂಟಿಗಳಾದ ಮಹದೇವಸ್ವಾಮಿ, ಶಿವಮಲ್ಲು, ನಂಜುಂಡಯ್ಯ, ಅಟೆಂಡರ್ ಮಹದೇವಸ್ವಾಮಿ ಇದ್ದರು. ತಾಲೂಕಿನ 39 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲೂ ಸ್ಥಳೀಯ ಆಡಳಿತಗಳು ಶ್ರಮದಾನ ಮಾಡುವ ಮೂಲಕ ಸ್ವಚ್ಛ ಭಾರತ ಅಭಿಯಾನದ ಜಾಗೃತಿ ಮೂಡಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net