

ಮಳವಳ್ಳಿ : ತಾಲೂಕಿನ ನೆಲ್ಲೂರು ಗ್ರಾಮದಲ್ಲಿ ಫೆ.7 ರಂದು ಗ್ರಾಮ ದೇವತೆ ಶ್ರೀ ಮಾರಮ್ಮ ದೇವಿಯ ಮೂರ್ತಿ ಪ್ರತಿಷ್ಠಾಪನೆ ಮತ್ತು ದೇವಾಲಯ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ.ಪುರಾತನ ಮಾರಮ್ಮ ಗುಡಿಯನ್ನು ನೆಲಸಮಗೊಳಿಸಿ, ಗ್ರಾಮದ ಯಜಮಾನರು ಮತ್ತು ಭಕ್ತರ ಸಹಕಾರದಿಂದ ನೂತನ ದೇವಾಲಯ ನಿರ್ಮಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೂಜಾ ಕಾರ್ಯಕ್ರಮ, ವಿವಿಧ ಹೋಮಗಳನ್ನು ಹಮ್ಮಿಕೊಳ್ಳಲಾಗಿದೆ. ಗುರುವಾರ ಸಂಜೆಯಿಂದಲೇ ದೇವಾಲಯದ ಆವರಣದಲ್ಲಿ ಗಣಪತಿ ಹೋಮ ಸೇರಿದಂತೆ ಕಳಶ, ನವಗ್ರಹ ಮತ್ತು ಇತರ ದೇವತೆಗಳ ಪೂಜೆಗಳು ನೆರವೇರಲಿವೆ. ಶುಕ್ರವಾರ ಬೆಳಗಿನಜಾವ ದೇವಿಯ ಶಿಲಾಮೂರ್ತಿ ಪ್ರತಿಷ್ಠಾಪನೆಯು ನಾಗಭೂಷಣ ಆರಾಧ್ಯ ಅವರ ತಂಡದಿಂದ ನೆರವೇರಿಸಲಿದೆ. ನಂತರ ಗ್ರಾಮದಲ್ಲಿ ಮಂಟೇಸ್ವಾಮಿ ಹಾಗೂ ಮತ್ತಿತಾಳೇಶ್ವರ ಬಸವಗಳ ಮೆರವಣಿಗೆ ಹಮ್ಮಿ ಕೊಳ್ಳಲಾಗಿದೆ. ಭಕ್ತ ಸಮೂಹಕ್ಕೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ ಎಂದು ಗ್ರಾಮದ ಯಜಮಾನರು ಪ್ರಕಟಣೆಯಲ್ಲಿ ಕೋರಿದ್ದಾರೆ.