

ಮಳವಳ್ಳಿ : ತಾಲೂಕಿನ ನೆಲ್ಲೂರು ಗ್ರಾಮದಲ್ಲಿ ಈರಮ್ಮ ತಾಯಿ, ದೇವಮ್ಮ ಮತ್ತು ನಾಗದೇವತೆಗಳ ಪ್ರತಿಷ್ಠಾಪನೆ ಮತ್ತು ದೇವಾಲಯ
ಉದ್ಘಾಟನೆ ಕಾರ್ಯಕ್ರಮ ಭಾನುವಾರ ಸಕಲ ವಿಧಿ,ವಿಧಾನ ಸಹಿತ ನೆರವೇರಿತು. ಶಿಥಿಲಾವಸ್ಥೆಯಲ್ಲಿದ್ದ 3 ದೇವರ ಗುಡಿಗಳನ್ನು ಮೆಣಸಗೆರೆ-ನೆಲ್ಲೂರು ಗ್ರಾಮಸ್ಥರು ಮತ್ತು ಯಜಮಾನರು ಭಕ್ತರ ಸಹಕಾರದಿಂದ ಮರು ನಿರ್ಮಾಣ ಮಾಡಿದ್ದು, ಈ ಸಂದರ್ಭ ಗಣಪತಿ ಮತ್ತು ನವಗ್ರಹ ಹೋಮ ನಡೆಸಲಾಯಿತು.
ಜ್ಯೋತಿಷಿ ಮಹೇಶ ಆರಾಧ್ಯ ನೇತೃತ್ವದ ಪುರೋಹಿತರ ತಂಡ ಧಾರ್ಮಿಕ ವಿಧಿಗಳ ನೇತೃತ್ವ ವಹಿಸಿದ್ದರು. ನೆರೆದ ಭಕ್ತ ಸಮೂಹಕ್ಕೆ ಅನ್ನಸಂತರ್ಪಣೆ ಮಾಡಲಾಯಿತು. ಮೆಣಸಗೆರೆ ಹಾಗೂ ನೆಲ್ಲೂರು ಗ್ರಾಮದ ಯಜಮಾನರು, ಮುಖಂಡರು ಮತ್ತು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.