ಸುಜ್ಜಲೂರು ಕೃಷಿ ಸಹಕಾರ ಸಂಘಕ್ಕೆ 19 ಲಕ್ಷ ರೂ. ಲಾಭ

16 mlv 3
Published on

ಮಳವಳ್ಳಿ: ತಾಲೂಕಿನ ಸುಜ್ಜಲೂರು ವಿವಿಧೋದ್ದೇಶ ಪ್ರಾಥಮಿ ಕೃಷಿ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸೋಮವಾರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನಡೆಯಿತು.ಸಂಘದ ಸಿಇಒ ಅಶೋಕ್ ವಾರ್ಷಿಕ ವರದಿ ಮಂಡಿಸಿ, 2023-24ನೇ ಸಾಲಿನಲ್ಲಿ ಸಂಘ 62 ಕೋಟಿ ರೂ. ವಹಿವಾಟು ನಡೆಸಿ, ವಿವಿಧ ವೆಚ್ಚಗಳನ್ನು ಭರಿಸಿ ನಿವ್ವಳ 19.5 ಲಕ್ಷ ರೂ. ಲಾಭ ಗಳಿಸಿದೆ ಎಂದರು. ಜಿಲ್ಲಾ ಸಹಕಾರ ಸಂಘದಿಂದ ನಮ್ಮ ಸಂಘದ ಉತ್ತಮ ವಹಿವಾಟಿಗಾಗಿ ಪ್ರಶಸ್ತಿಗೆ ಭಾಜನವಾಗಿದೆ ಎಂದು ಮಾಹಿತಿ ನೀಡಿದರು.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ 10 ವಿದ್ಯಾರ್ಥಿಗಳಿಗೆ ನಗದು ಬಹುಮಾನದೊಂದಿಗೆ ಸನ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷ ನಂಜಯ್ಯ, ನಿರ್ದೇಶಕರಾದ ಎಚ್.ಸಿ.ಮಹೇಶ್, ಎಚ್,ಬಿ.ಚಂದ್ರು, ಮರಿಸ್ವಾಮಿ, ಮಹದೇವಪ್ಪ, ಸಿ.ಕೆ.ಲಿಂಗರಾಜು, ಚಂದ್ರಪ್ಪ, ಜಿ.ಎಲ್.ಮಹದೇವಯ್ಯ, ನಂದಿನಿ, ಮಹದೇವಮ್ಮ
ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net