ಮಾಂಗಲ್ಯ ಸಮೇತ ಸರ ಅಪಹರಣ

9 mlv 1
Published on

ಮಳವಳ್ಳಿ : ತಾಲೂಕಿನ ಮುಟ್ಟನಹಳ್ಳಿ ಮುಖ್ಯರಸ್ತೆಯ ನಾರಾಯಣಪುರದಿಂದ ಕೋಣನಕೊಪ್ಪಲು ಗ್ರಾಮಕ್ಕೆ ಭಾನುವಾರ ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿ ಅಡ್ಡಗಟ್ಟಿದ ದುಷ್ಕರ್ಮಿಗಳು ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ. ಮದ್ದೂರು ಪಟ್ಟಣದ ಪರಮೇಶ್ವರ ಅವರು ಪತ್ನಿ ಪ್ರೇಮಾರೊಂದಿಗೆ ಟಿ.ನರಸೀಪುರ ತಾಲೂಕಿನ ಮುಡುಕುತೊರೆ ಮಲ್ಲಿಕಾರ್ಜುನ-ಪಾರ್ವತಿ ದೇವಸ್ಥಾನಕ್ಕೆ ತೆರಳುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದ ಇಬ್ಬರು ಆರೋಪಿಗಳು ಪ್ರೇಮಾ ಅವರ ಮಾಂಗಲ್ಯ ಸಮೇತ 70 ಗ್ರಾಂಚಿನ್ನದ ಸರ ಅಪಹರಿಸಿ ಪರಾರಿಯಾಗಿದ್ದಾರೆ. ಈ ಸಂದರ್ಭ ದಂಪತಿ ಆಯತಪ್ಪಿ ಬೈಕ್‌ನಿಂದ ಬಿದ್ದು ಗಾಯಗೊಂಡಿದ್ದಾರೆ. ಅಕ್ಕಪಕ್ಕದ ಜಮೀನಿನಲ್ಲಿದ್ದ ಕೃಷಿಕರು ಧಾವಿಸಿ, ದಂಪತಿಗೆ ಉಪಚರಿಸಿದರು. ಬೆಳಕವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net