ಸಾಲ ವಿತರಣೆ, ವಸೂಲಿಯಲ್ಲಿ ಮಳವಳ್ಳಿ ಬ್ಯಾಂಕ್ ಸಾಧನೆ

21 mlv 2
Published on

ಮಳವಳ್ಳಿ: ಸಾಲ ವಿತರಣೆಯಲ್ಲಿ ರಾಜ್ಯದಲ್ಲಿರುವ 181 ಪಿಕಾರ್ಡ್ ಬ್ಯಾಂಕ್‌ಗಳಲ್ಲಿ ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಒಂಬತ್ತನೇ ಹಾಗೂ ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿದ್ದು, ಸಾಲ ವಸೂಲಾತಿಯಲ್ಲೂ ನಮ್ಮ ಬ್ಯಾಂಕ್‌ಗೆ ಜಿಲ್ಲೆಗೆ ಎರಡನೇ ಸ್ಥಾನ ಗಳಿಸುವ ಮೂಲಕ ನಷ್ಟದಿಂದ ಆದಾಯದತ್ತ ಸಾಗುತ್ತಿದೆ ಎಂದು ಬ್ಯಾಂಕ್ ಅಧ್ಯಕ್ಷ ಎ.ಎಸ್.ಶಿವಮಲ್ಲಪ್ಪ ತಿಳಿಸಿದರು.


ಪಟ್ಟಣದ ಬ್ಯಾಂಕ್ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಬ್ಯಾಂಕ್‌ನ 71ನೇ ವರ್ಷದ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಲ ಪಡೆದ ಷೇರುದಾರರು ಪ್ರಸ್ತುತ ವರ್ಷದಲ್ಲಿ ಉತ್ತಮವಾಗಿ ವಹಿವಾಟು ನಡೆಸುವುದರ ಜತೆಗೆ ಸಕಾಲಕ್ಕೆ ಸಾಲದ ಕಂತನ್ನು ಮರುಪಾವತಿ ಮಾಡಿರುವುದರಿಂದ ಈ ಸಾಧನೆ ಸಾಧ್ಯವಾಗಿದೆ ಎಂದರು.


ಕಳೆದ ವರ್ಷವಿದ್ದ ನಷ್ಟದ ಬಾಬ್ತು 29 ಲಕ್ಷದಿಂದ ಪ್ರಸ್ತುತ ವರ್ಷ 11 ಲಕ್ಷ 89 ಸಾವಿರ ರೂ.ಗೆ ಇಳಿಕೆಯಾಗಿದೆ. ಇದೇ ರೀತಿಯಲ್ಲಿ ಎಲ್ಲರೂ ಸಹಕಾರ ನೀಡುವ ಮುಂದಿನ ದಿನಗಳಲ್ಲಿ ಬ್ಯಾಂಕಿನ ವಹಿವಾಟನ್ನು ಲಾಭದಾಯಕದತ್ತ ಮುನ್ನಡೆಸೋಣ ಎಂದು ಮನವಿ ಮಾಡಿದರು.

ಉಪಾಧ್ಯಕ್ಷೆ ಲಕ್ಷ್ಮೀ, ನಿರ್ದೇಶಕರಾದ ಎಂ.ವಿ.ಮಾಯಣ್ಣ, ಶಿವರಾಜು, ರಮೇಶ್, ನಿಂಗಯ್ಯ, ರತ್ನಮ್ಮ, ಬಸವರಾಜು, ದೊಡ್ಡಮಾದೇಗೌಡ, ಶೋಭಾ, ಶಿವಮಾದೇಗೌಡ, ಪ್ರಸನ್ನ, ಸುರೇಶ್, ರಮ್ಯಾ, ಪ್ರಭಾರ ವ್ಯವಸ್ಥಾಪಕ ಎನ್.ಎಸ್.ಸುನೀಲ್ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net