ಕಾರಿಗೆ ಜೆಸಿಬಿ ಡಿಕ್ಕಿಯಾಗಿ ಚಾಲಕನಿಗೆ ತೀವ್ರ ಗಾಯ

25mlv1
Published on

ಮುಟ್ಟನಹಳ್ಳಿ ಸಮೀಪ ಅಪಘಾತ
ಮಳವಳ್ಳಿ : ತಾಲೂಕಿನ ಮುಟ್ಟನಹಳ್ಳಿ ಸಮೀಪದ ದೊಡ್ಡಮ್ಮತಾಯಿ ದೇವಸ್ಥಾನದ ಬಳಿ ಶನಿವಾರ ಜೆಸಿಬಿ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರು ಚಾಲಕ ತೀವ್ರವಾಗಿ ಗಾಯಗೊಂಡಿದ್ದಾರೆ.
ಗ್ರಾಮದ ಶೋಭಾ ಎಂಬುವರ ಪುತ್ರ ಅಚ್ಚುತ(30) ಗಾಯಾಳು. ತಿ.ನರಸೀಪುರ ಮುಖ್ಯರಸ್ತೆಯಲ್ಲಿ ಬೆಳಕವಾಡಿ ಕಡೆಯಿಂದ ಬರುತ್ತಿದ್ದ ಜೆಸಿಬಿ ಯಂತ್ರಕ್ಕೂ ಸ್ವಗ್ರಾಮದಿಂದ ತೆರಳುತ್ತಿದ್ದ ಅಚ್ಚುತ ಚಾಲನೆ ಮಾಡುತ್ತಿದ್ದ ಕಾರಿನ ನಡುವೆ ಅವಘಡ ಸಂಭವಿಸಿದೆ.
ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಕಾರಿನಲ್ಲಿ ಸಿಲುಕಿ ನರಳಾಡುತ್ತಿದ್ದ ಚಾಲಕನನ್ನು ಸ್ಥಳೀಯರು ಹೊರಗೆಳೆದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ.
ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net