ಲಾರಿ ಡಿಕ್ಕಿಯಾಗಿ ಮೃತಪಟ್ಟ ಹಸು, ಬಿಕ್ಕಿ ಬಿಕ್ಕಿ ಅತ್ತ ಮಕ್ಕಳು

5 smg 15(1)
Published on

ಶಿವಮೊಗ್ಗ: ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಮಲವಗೊಪ್ಪದಲ್ಲಿ ಲಾರಿ ಡಿಕ್ಕಿಯಾಗಿ ಹಸು ಮೃತಪಟ್ಟಿದ್ದು ಪ್ರೀತಿಯಿಂದ ಸಾಕಿದ್ದ ಹಸು ಕಳೆದುಕೊಂಡ ಮಾಲೀಕನ ಮಕ್ಕಳು ಬಿಕ್ಕಿ ಬಿಕ್ಕಿ ಅತ್ತಿರುವ ವಿಡಿಯೋ ವೈರಲ್ ಆಗಿದೆ.

ನಗರದ ಮಲವಗೊಪ್ಪ ಬಡಾವಣೆಯ ಹಸುವಿಗೆ ಶಿವಮೊಗ್ಗದಿಂದ ಭದ್ರಾವತಿ ಕಡೆ ಹೊರಟಿದ್ದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಹಸು ಸ್ಥಳದಲ್ಲೇ ಮೃತಪಟ್ಟಿದೆ. ಹಸು ಸಾವನ್ನಪ್ಪಿದ ವಿಚಾರ ತಿಳಿಯುತ್ತಿದ್ದಂತೆಯೇ ಮಾಲೀಕರ ಮಕ್ಕಳು ರಸ್ತೆಯಲ್ಲಿಯೇ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಹಸು ಮೃತಪಟ್ಟಿರುವುದಕ್ಕೆ ಮಕ್ಕಳು ಅಳುತ್ತಿರುವುದನ್ನು ನೋಡಿ ಜನರು ಮರುಕಪಟ್ಟಿದ್ದಾರೆ.

ಹಸುವಿಗೆ ಪೂಜಾ ಎಂದು ನಾಮಕರಣ ಮಾಡಿದ್ದರು. ಹಸು ಮನೆಯ ಮಕ್ಕಳೊಂದಿಗೆ ತುಂಬ ಆತ್ಮೀಯವಾಗಿ ಬೆರೆಯುತ್ತಿತ್ತು. ಭಾನುವಾರ ಮೇಯಲು ಹೋಗಿದ್ದಾಗ ಲಾರಿ ಡಿಕ್ಕಿಯಾಗಿ ಸಾವನ್ನಪ್ಪಿದೆ. ಈ ವಿಚಾರ ತಿಳಿದ ಮಕ್ಕಳು ಹಸುವಿನ ಬಳಿ ಬಂದು ನಡುರಸ್ತೆಯಲ್ಲಿಯೇ ಅತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net