

ಬೆಳ್ತಂಗಡಿ: ಹಾವೇರಿ ಜಿಲ್ಲೆ ಹಾನಗಲ್ ನಿವಾಸಿ 76 ವರ್ಷದ ಮಾಲತೇಶ ಗೊರಪಜ್ಜ ಪಾದಯಾತ್ರೆ ಮೂಲಕ ಶನಿವಾರ ಧರ್ಮಸ್ಥಳ ತಲುಪಿದ್ದಾರೆ.
ಅವರು 40 ವರ್ಷಗಳಿಂದ ಧರ್ಮಸ್ಥಳ ಲಕ್ಷ ದೀಪೋತ್ಸವಕ್ಕೆ ಪಾದಯಾತ್ರೆಯಲ್ಲಿ ಬರುತ್ತಿದ್ದಾರೆ. ನವೆಂಬರ್ 17ರಂದು ಹಾನಗಲ್‌ನಿಂದ ಪಾದಯಾತ್ರೆ ಪ್ರಾರಂಭಿಸಿ, ದಿನಕ್ಕೆ ಸುಮಾರು 20 ಕಿ.ಮೀ.ನಂತೆ ನಡೆದಿದ್ದರು. ಒಟ್ಟು ಸುಮಾರು 250 ಕಿ.ಮೀ.ಗೂ ಅಧಿಕ ದೂರ ನಡೆದಿದ್ದಾರೆ.
ಪಾದಯಾತ್ರೆಯಿಂದ ನನ್ನ ಆರೋಗ್ಯ ಮತ್ತು ಆಯುಷ್ಯ ವೃದ್ಧಿಯಾಗಿದೆ. ಮಾನಸಿಕ ನೆಮ್ಮದಿ, ಶಾಂತಿ, ಸಂತೋಷ ಸಿಕ್ಕಿದೆ. ದಾರಿಯಲ್ಲಿ ನನಗೆ ಎಲ್ಲರೂ ಸಹಕಾರ ನೀಡಿದ್ದಾರೆ ಎಂದು ಅಭಿಮಾನದಿಂದ ಹೇಳುತ್ತಾರೆ ಮಾಲತೇಶ ಗೊರಪಜ್ಜ.