

ಬೈಲಹೊಂಗಲ: ಸತತ ಮಳೆಯಿಂದ ತುಂಬಿ ಹರಿಯುತ್ತಿರುವ ಮಲಪ್ರಭಾ ನದಿಗೆ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ಡಾ. ಮಹಾಂತಯ್ಯಶಾಸ್ತ್ರಿ ಆರಾದ್ರಿಮಠ ಸಾನ್ನಿಧ್ಯದಲ್ಲಿ ಭಕ್ತರು ಬಾಗಿನ ಅರ್ಪಿಸಿದರು.
ತಾಲೂಕಿನ ನಯಾನಗರ ಗ್ರಾಮದ ಮಲಪ್ರಭಾ ನದಿಗೆ ತೆರಳಿದ ಭಕ್ತರು ಧಾರ್ಮಿಕ ವಿಧಿ, ವಿಧಾನಗಳಿಂದ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.
ಡಾ. ಮಹಾಂತಯ್ಯಶಾಸ್ತ್ರಿ ಆರಾದ್ರಿಮಠ ಮಾತನಾಡಿ, ಈ ಭಾಗದ ಜನರ ಜೀವ ನಾಡಿ ಆಗಿರುವ ಮಲಪ್ರಭಾ ನದಿ ವರ್ಷವಿಡಿ ಮೈದುಂಬಿಕೊಂಡು ಹರಿಯುತ್ತಿದ್ದರೆ, ರೈತರು, ಸಾರ್ವಜನಿಕರ ಅನುಕೂಲವಾಗಲಿದೆ ಎಂದರು. ಮಲಪ್ರಭಾ ನದಿ ನೀರು ಪಾವಿತ್ರೃತೆಯಿಂದ ಕೂಡಿದ್ದು, ಈ ಭಾಗಕ್ಕೆ ಅಮೃತವಾಗಿದೆ ಎಂದರು.
ರಾಯಣ್ಣ ಸಮಿತಿ ಅಧ್ಯಕ್ಷ ರಾಜು ಸೊಗಲ, ಉಪಾಧ್ಯಕ್ಷ ಸೋಮನಾಥ ಸೊಪ್ಪಿಮಠ, ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ರಾಜು ಕುಡಸೋಮಣ್ಣವರ, ಶಿವಾನಂದ ಬಡ್ಡಿಮನಿ, ಶರೀಫ್ ನದಾಫ್, ರವಿ ಹುಲಕುಂದ ಇತರರು ಇದ್ದರು.