ಮೈದುಂಬಿದ ಮಲಪ್ರಭಾ ನದಿ

0102
Published on

ಬೆಳಗಾವಿ/ಖಾನಾಪುರ: ನಗರವೂ ಸೇರಿ ಜಿಲ್ಲೆಯ ಹಲವೆಡೆ ಭಾನುವಾರವೂ ಮಳೆ ಮುಂದುವರಿದಿದೆ. ಖಾನಾಪುರ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಉತ್ತಮ ವರ್ಷಧಾರೆಯ ಪರಿಣಾಮ ಮಲಪ್ರಭಾ, ಮಹದಾಯಿ ಮತ್ತು ಪಾಂಡರಿ ನದಿಗಳು ತುಂಬಿ ಹರಿಯುತ್ತಿವೆ. ಬೆಳಗಾವಿಯಲ್ಲಿ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಆಗಾಗ ಮಳೆ ಸುರಿಯಿತು.

ಕಣಕುಂಬಿ ಅರಣ್ಯ ಪ್ರದೇಶದಲ್ಲಿ ಭಾನುವಾರ 7.04 ಸೆಂ.ಮೀ ಮಳೆ ಸುರಿದಿದೆ. ತಾಲೂಕಿನ ಲೋಂಡಾ, ಗುಂಜಿ, ಭೀಮಗಡ, ನಾಗರಗಾಳಿ, ನೀಲಾವಡೆ ಮತ್ತು ಜಾಂಬೋಟಿ ಅರಣ್ಯ ಪ್ರದೇಶದಲ್ಲಿ ಭಾನುವಾರ ಇಡೀ ದಿನ ಮಳೆಯಾಗಿದೆ. ಜಾಂಬೋಟಿಯಲ್ಲಿ 36.4 ಮಿ.ಮೀ., ಲೋಂಡಾ 56 ಮಿ.ಮೀ., ಗುಂಜಿ 35.2 ಮಿ.ಮೀ., ಅಸೋಗಾ 34 ಮಿ.ಮೀ., ನಾಗರಗಾಳಿ ಅರಣ್ಯದಲ್ಲಿ 37.6 ಮಿ.ಮೀ., ಬೀಡಿ 16.4 ಮಿ.ಮೀ., ಕಕ್ಕೇರಿ 50 ಮಿ.ಮೀ., ಖಾನಾಪುರ ಪಟ್ಟಣ 41.4 ಮಿ.ಮೀ. ಮಳೆ ಸುರಿದಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net