ಮಳಲಿ ಕ್ರಾಸ್ ರಿಕ್ಷಾ ಪಾರ್ಕ್ ಉದ್ಘಾಟನೆ

New Project (6)
Published on

ಗುರುಪುರ: ಗಂಜಿಮಠ ಗ್ರಾಪಂ ವ್ಯಾಪ್ತಿಯ ಮಳಲಿ ಕ್ರಾಸ್ ಬಳಿ ನಿರ್ಮಿಸಲಾದ ಜೈ ಭಾರತ್ ಮಾತಾ ಆಟೋ ರಿಕ್ಷಾ ಪಾರ್ಕ್ ಸೋಮವಾರ ಉದ್ಘಾಟನೆಗೊಂಡಿತು.

ಗಂಜಿಮಠ ಗ್ರಾಪಂ ಸದಸ್ಯೆ ರೇಖಾ ಆರ್. ಪಾರ್ಕ್‌ನ ನಾಮಲಕ ಅನಾವರಣಗೊಳಿಸಿದರು. ಬಿಜೆಪಿ ಉತ್ತರ ಮಂಡಲ ಉಪಾಧ್ಯಕ್ಷ ಸೋಹನ್ ಅತಿಕಾರಿ, ಗಂಜಿಮಠ ಗ್ರಾಪಂ ಸದಸ್ಯರಾದ ನೋಣಯ್ಯ ಕೋಟ್ಯಾನ್, ಸೀತಾರಾಮ ಪೂಜಾರಿ, ಪ್ರವೀಣ್ ಶೆಟ್ಟಿ ಮಳಲಿ, ಇಂದಿರಾಕ್ಷಿ ಶೆಟ್ಟಿ, ಸೌಮ್ಯಾ ಎಸ್., ಉದ್ಯಮಿಗಳಾದ ರಾಜೇಂದ್ರ ಆಳ್ವ, ಮನೋಜ್ ಕೊಟ್ಟಾರಿ, ಸುನೀಲ್ ಪೂಜಾರಿ ಗಂಜಿಮಠ, ಮಳಲಿ ರಾಮಾಂಜನೇಯ ಭಜನಾ ಮಂದಿರ ಅಧ್ಯಕ್ಷ ಶ್ರೀನಿ ಮಳಲಿ, ಕಾರ್ಯದರ್ಶಿ ವಿಶಾಲ್ ಕುಮಾರ್, ರಿಕ್ಷಾ ಪಾರ್ಕ್ ಅಧ್ಯಕ್ಷ ಪುನೀತ್‌ರಾಜ್ ಮತ್ತಿತರರಿದ್ದರು. ಪಾರ್ಕ್ ಕಾರ್ಯದರ್ಶಿ ಗಣೇಶ್ ನಾರಳ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net