ಮಲಗುಂದ ಗ್ರಾಪಂಗೆ ದೇವೇಂದ್ರಪ್ಪ ಹುಲ್ಲಾಳ ಅಧ್ಯಕ್ಷ

Malagunda Gp President is Devendrappa Hullal
Published on

ಹಾನಗಲ್ಲ: ತಾಲೂಕಿನ ಮಲಗುಂದ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ದೇವೇಂದ್ರಪ್ಪ ಹುಲ್ಲಾಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗುರುವಾರ ನಿಗದಿಯಾಗಿದ್ದ ಚುನಾವಣೆಯಲ್ಲಿ ದೇವೇಂದ್ರಪ್ಪ ಹುಲ್ಲಾಳ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾ ಅಧಿಕಾರಿ, ತಾಪಂ ಇಒ ಪರಶುರಾಮ ಪೂಜಾರ ಅವಿರೋಧ ಆಯ್ಕೆ ಪ್ರಕಟಿಸಿದರು. ಹಿಂದೆ ಅಧ್ಯಕ್ಷರಾಗಿದ್ದ ಬಿಜೆಪಿ ಬೆಂಬಲಿತ ಸೋಮನಗೌಡ ಕಬ್ಬೂರ ವಿರುದ್ಧ ಇತ್ತೀಚೆಗೆ ಅವಿಶ್ವಾಸ ಮಂಡಿಸಲಾಗಿತ್ತು.

ನೂತನ ಅಧ್ಯಕ್ಷರ ಆಯ್ಕೆ ಪ್ರಕಟಿಸುತ್ತಿದ್ದಂತೆಯೇ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಗ್ರಾಪಂ ಉಪಾಧ್ಯಕ್ಷೆ ಗಂಗವ್ವ ರ್ಬಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಗ್ರಾಪಂ ಸದಸ್ಯರಾದ ಚಿದಾನಂದಸ್ವಾಮಿ ಹಿರೇಮಠ, ಮಂಜಣ್ಣ ತಳವಾರ, ಮಂಜಕ್ಕ ತಳವಾರ, ಸುವರ್ಣ ಪೂಜಾರ, ರೇಖಾ ಪೂಜಾರ, ಕವಿತಾ ಕನ್ನೇಶ್ವರ, ಮುಖಂಡರಾದ ಗುತ್ತೆಪ್ಪ ತಳವಾರ, ತಿಪ್ಪಣ್ಣ ದೊಡ್ಡಕೋವಿ, ಹನುಮಂತ ರ್ಬಾ, ಸುರೇಶ ತಳವಾರ, ಮಂಜು ಅಂಗಡಿ, ಗಜೇಂದ್ರ ಕಲ್ಲಾಪೂರ, ಮಾರ್ತಾಂಡಪ್ಪ ಕೂಸನೂರ, ರಾಘವೇಂದ್ರ ಗುಡ್ಡದವರ, ಚಂದ್ರು ವಡ್ಡರ, ವೀರಭದ್ರಪ್ಪ ಪೂಜಾರ, ಯಲ್ಲಪ್ಪ ತಳವಾರ, ಫಕೀರಪ್ಪ ಪೂಜಾರ, ಶ್ರೀಕಾಂತ ತಳವಾರ, ಮಾಲತೇಶ ಹುಲ್ಲಾಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net