ಮಾಲಗಿತ್ತಿ ಬಾಲಕಿಯರ ಥ್ರೋಬಾಲ್ ತಂಡ ರಾಜ್ಯಮಟ್ಟಕ್ಕೆ ಆಯ್ಕೆ

malagitti
ಹನಮಸಾಗರ ಸಮೀಪದ ಮಾಲಗಿತ್ತಿ ಸರ್ಕಾರಿ ಪ್ರಾಥಮಿಕ ಶಾಲೆಯ ಬಾಲಕಿಯರ ಥ್ರೋಬಾಲ್ ತಂಡ ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಕಲಬುರಗಿ ವಿಭಾಗ ಮಟ್ಟದ ಕ್ರಿಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.
Published on

ಹನಮಸಾಗರ: ಸಮೀಪದ ಮಾಲಗಿತ್ತಿ ಸರ್ಕಾರಿ ಪ್ರಾಥಮಿಕ ಶಾಲೆಯ ಬಾಲಕಿಯರ ಥ್ರೋಬಾಲ್ ತಂಡ ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಕಲಬುರಗಿ ವಿಭಾಗ ಮಟ್ಟದ ಕ್ರಿಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.

ಬಿಇಒ ಸುರೇಂದ್ರ ಕಾಂಬಳೆ, ಶಾಲೆಯ ಶಿಕ್ಷಕರು ಬಾಲಕಿಯರ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ಶಿಕ್ಷಕಿ ವಿಶಾಲಾಕ್ಷಿ ಡಿ.ಬಿ ಸಾಮಾಜಿಕ ಜಾಲತಾಣ ಮೂಲಕ ಮೆಚ್ಚುಗೆ

ರಾಜ್ಯಮಟ್ಟದ ಸ್ಪರ್ಧೆಯಲ್ಲಿಯೂ ವಿಜೇತರಾಗಿ ಶಾಲೆಗೆ ಮತ್ತು ಪಾಲಕರಿಗೆ, ಗ್ರಾಮಕ್ಕೆ ಕಿರ್ತೀ ತರಬೇಕು. ನಿಮ್ಮಂತಹ ವಿದ್ಯಾರ್ಥಿನಿಯರಿಗರ ನಮ್ಮ ಬೆಂಬಲ ಇರುತ್ತದೆ ಎಂದು ಈ ಮೊದಲು ಶಾಲೆಯಲ್ಲಿ ಸೇವೆ ಸಲ್ಲಿಸಿದ ಡಾವಣಗೆರೆ ಮೂಲದ ಶಿಕ್ಷಕಿ ವಿಶಾಲಾಕ್ಷಿ ಡಿ.ಬಿ ಸಾಮಾಜಿಕ ಜಾಲತಾಣ ಮೂಲಕ ವಿದ್ಯಾರ್ಥಿನಿಯರನ್ನು ಪ್ರೋತ್ಸಾಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net