ಗುಡಿದೊಡ್ಡಿ ಗ್ರಾಮದಲ್ಲಿ ಮಳಗನಪ್ಪಸ್ವಾಮಿ ಜಾತ್ರಾ ಮಹೋತ್ಸವ

06MDR02
Published on

ಮದ್ದೂರು: ತಾಲೂಕಿನ ಗುಡಿದೊಡ್ಡಿ ಗ್ರಾಮದ ಬೀರೇಶ್ವರ ಚನ್ನಕೇಶ್ವರ (ಮಳಗನಪ್ಪ) ಸ್ವಾಮಿ ದೇವಾಲಯದಲ್ಲಿ ಆಯುಧಪೂಜೆ ಹಾಗೂ ವಿಜಯದಶಮಿ ಹಬ್ಬದ ಪ್ರಯುಕ್ತ ಸಂಭ್ರಮದ ಜಾತ್ರಾ ಮಹೋತ್ಸವ ನಡೆಯಿತು.

ಮಂಗಳವಾರ ಬೀರೇಶ್ವರ ಚನ್ನಕೇಶ್ವರ ಸ್ವಾಮಿಯ ಆಯುಧಗಳನ್ನು ತೊಳೆದು ಪೂಜೆ ಹಾಗೂ ಮಹಾ ಮಂಗಳಾರತಿ ಮಾಡಲಾಯಿತು. ಬುಧವಾರ ಸಂಜೆ 5.30ಕ್ಕೆ ಬಾಯಿಬೀಗ ಹಾಗೂ ರಾತ್ರಿ ಬೀರೇಶ್ವರ ಚನ್ನಕೇಶ್ವರಸ್ವಾಮಿ ಉತ್ಸವ ಸಡಗರ ಸಂಭ್ರಮದಿಂದ ನಡೆಯಿತು.

ಗುರುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ 14ನೇ ವರ್ಷದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಅಂದಾಜು 40 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಪುನೀತರಾದರು.

ದೇಗುಲದ ಆಡಳಿತ ಮಂಡಳಿತ ಪ್ರಧಾನ ಕಾರ್ಯದರ್ಶಿ ಮತ್ತು ಜಿಪಂ ಮಾಜಿ ಸದಸ್ಯ ಎಂ.ಮರಿಹೆಗಡೆ ಮಾತನಾಡಿ, ಬೀರೇಶ್ವರ ಚನ್ನಕೇಶ್ವರ ಸ್ವಾಮಿಯ ಉತ್ಸವವನ್ನು ಸಂಭ್ರಮದಿಂದ ಆಚರಣೆ ಮಾಡಿ ಜಾತ್ರೆ ಆಚರಿಸಲಾಗುತ್ತಿದೆ. ಬೀರೇಶ್ವರ ಚನ್ನಕೇಶ್ವರಸ್ವಾಮಿಗೆ ರಾಜ್ಯಾದ್ಯಂತ ಅಪಾರವಾದ ಭಕ್ತ ಸಮೂಹವಿದ್ದು ಮೂರು ದಿನಗಳ ಮುಂಚೆ ದೇವಾಲಯಕ್ಕೆ ಆಗಮಿಸಿ ದೇವರ ಸೇವೆ ಮಾಡುವುದು ಪ್ರತೀತಿಯಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net