ಶೆಟ್ಟಿಕೊಪ್ಪದಿಂದ ಶಬರಿಮಲೆ ಯಾತ್ರೆ ಹೊರಟ ಮಾಲಾಧಾರಿಗಳು

10 nrp 2
ಎನ್.ಆರ್.ಪುರ ತಾಲೂಕಿನ ಶೆಟ್ಟಿಕೊಪ್ಪದ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದಿಂದ ಮಾಲಾಧಾರಿಗಳು ಇರುಮುಡಿ ಹೊತ್ತು ಶಬರಿಯಾತ್ರೆಗೆ ತೆರಳಿದರು.
Published on

ಎನ್.ಆರ್.ಪುರ: ತಾಲೂಕಿನ ಶೆಟ್ಟಿಕೊಪ್ಪದ ಶ್ರೀಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಅಯ್ಯಪ್ಪ ಮಾಲಾಧಾರಿಗಳು ಇರುಮುಡಿ ಕಟ್ಟಿಕೊಂಡು ಶಬರಿಮಲೆ ಯಾತ್ರೆ ಕೈಗೊಂಡರು.
ದೇವಸ್ಥಾನ ಸಮಿತಿ ಅಧ್ಯಕ್ಷ ನಾಗರಾಜು ಮಾತನಾಡಿ, ಶೆಟ್ಟಿಕೊಪ್ಪದಲ್ಲಿ 10 ರಿಂದ 15 ಜನ ಅಯ್ಯಪ್ಪನ ಮಾಲಾಧಾರಿಗಳು 48 ದಿನ ವ್ರತ ಆಚರಣೆ ಮಾಡಿ ಭಕ್ತಿಯಿಂದ ಶ್ರೀ ಅಯ್ಯಪ್ಪ ಸ್ವಾಮಿ ಜ್ಯೋತಿ ದರ್ಶನಕ್ಕಾಗಿ ತೆರಳುತ್ತಾರೆ. ಕಳೆದೆರಡು ವರ್ಷ ಕರೊನಾದಿಂದ ಶಬರಿಮಲೆ ಯಾತ್ರೆಗೆ ಹೋಗದಿರುವುದರಿಂದ ಈ ಬಾರಿ ಅಧಿಕ ಮಾಲಾಧಾರಿಗಳು ಶಬರಿಮಲೆ ಯಾತ್ರೆಗೆ ತೆರಳುತ್ತಿದ್ದಾರೆ ಎಂದರು.
ಗುರುಸ್ವಾಮಿ ವಾವುಟ್ಟಿ ಸ್ವಾಮಿ ಮಾತನಾಡಿ, ಅಯ್ಯಪ್ಪನ ದರ್ಶನ ಭಾಗ್ಯವೇ ನಮಗೆ ಹೆಮ್ಮೆಯಾಗಿದೆ. ವ್ರತ ಆಚರಣೆಗಳು ಮನುಷ್ಯನ ಮನಸ್ಸನ್ನು ಹಿಡಿತದಲ್ಲಿಡಲು ಹಾಗೂ ಸನ್ಮಾರ್ಗ ತೋರಲು ಸಹಕಾರಿಯಾಗುತ್ತವೆ. ಎಲ್ಲರೂ ಜೀವನದಲ್ಲಿ ಒಮ್ಮೆಯಾದರೂ ಶಬರಿಮಲೆ ಯಾತ್ರೆ ಕೈಗೊಳ್ಳಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net