

ಹುಬ್ಬಳ್ಳಿ: ನಗರದ ಕೋಯಿನ್ ರಸ್ತೆ ಯು ಮಾಲ್ ನಲ್ಲಿರುವ ಮಲಬಾರ್ ಗೋಲ್ಡ್ ಡೈಮಂಡ್ಸ್ ಮಲಬಾರ್ ಚಾರಿಟಬಲ್ ಟ್ರಸ್ಟ್ ಅಡಿಯಲ್ಲಿ ನಗರದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ವಿದ್ಯಾರ್ಥಿನಿಯರಿಗೆ ಸ್ಕಾಲರ್ ಶಿಪ್ ವಿತರಣೆ ಮಾಡಲಾಯಿತು.
ವಿವಿಧ ಸರ್ಕಾರಿ ಕಾಲೇಜಿನ 436 ವಿದ್ಯಾರ್ಥಿನಿಯರಿಗೆ ಒಟ್ಟು 40.30 ಲಕ್ಷ ರೂಪಾಯಿ ಶಿಷ್ಯ ವೇತನ ವಿತರಣೆ ಮಾಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಪ್ರಸಾದ ಅಬ್ಬಯ್ಯ, ಮಲಬಾರ್ ಆಭರಣ ಸಂಸ್ಥೆಯವರು ವಿದ್ಯಾರ್ತಿನಿಯರ ವಿದ್ಯಾಭ್ಯಾಸಕ್ಕಾಗಿ ಸಾಕಷ್ಟು ನೆರವು ನೀಡುತ್ತಿದ್ದಾರೆ. ಸಮಾಜಮುಖಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಮೇಯರ್ ರಾಮಪ್ಪ ಬಡಿಗೇರ, ಪೊಲೀಸ್ ಕಮಿಷನರ್ ಎನ್. ಶಶಿಕುಮಾರ ಮಾತನಾಡಿದರು.
ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಮುಖ್ಯಸ್ಥ ಅಜ್ಮಲ್ ರೋಷನ್ ಅವರು ಮಲಬಾರ್ ಗೋಲ್ಡ್ ಮತ್ತು ಮಲಬಾರ್ ಚಾರಿಟಬಲ್ ಟ್ರಸ್ಟ್ ಧ್ಯೇಯೋದ್ದೇಶಗಳನ್ನು ವಿವರಿಸಿದರು.
ಪಾಲಿಕೆ ಸದಸ್ಯ ವಿಜಯಾನಂದ ಶೆಟ್ಟಿ, ಮೋಹನ ಅಸುಂಡಿ, ಮಲಬಾರ್ ಸಂಸ್ಥೆಯ ಮಹಮ್ಮದ ಅಫ್ರಿದ್, ಸಿ.ಎಸ್.ಆರ್. ಮುಖ್ಯಸ್ಥ ಹೈದರ್, ಮಾರ್ಕೆಟಿಂಗ್ ಮ್ಯಾನೇಜರ್ ಸಿರಾಜ ಮುಲ್ಲಾ, ಶಶಿಕಲಾ ಚಂದನ್ನವರ, ಶಿವಕುಮಾರ ಹಿರೇಮಠ, ಫಾತಿಮಾ ಜಿ, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ಪಾಲಕರು ಉಪಸ್ಥಿತರಿದ್ದರು.