

ಹಾಸನ: ವಿಶ್ವದ ಅತೀ ದೊಡ್ಡ ರೀಟೇಲ್ ಚಿನ್ನಾಭರಣ ಸಂಸ್ಥೆಯಾದ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ತನ್ನ ಇತ್ತೀಚಿನ ಸೊಗಸಾದ ನೈಸರ್ಗಿಕ ವಜ್ರದ ಆಭರಣ ಸಂಗ್ರಹವಾದ ನೂವಾ ಬೈ ಮೈನ್ ಡೈಮಂಡ್ಸ್ ವಜ್ರ ಆಭರಣ ಸಂಗ್ರಹವನ್ನು ಬಿಡುಗಡೆ ಮಾಡಿದೆ. ಈ ಸಂಗ್ರಹವನ್ನು ಗ್ರಾಹಕರಾದ ಹರ್ಷಿತಾ ಹಾಗೂ ಅನಮ್ ಸಮಿ ಅನಾವರಣಗೊಳಿಸಿದರು.
ಈ ಹೊಸ ಸಂಗ್ರಹದಲ್ಲಿ ವಿನೂತನವಾಗಿರುವ ವಜ್ರಾಭರಣಗಳ ಡಿಸೈನ್‌ಗಳು, ವೇವ್ಸ್, ಫೋಲ್ಡ್ ಮತ್ತು ಟೆಕ್ಚರ್‌ಗಳನ್ನು ಒಳಗೊಂಡಿವೆ. ಈ ಸಂಗ್ರಹದಲ್ಲಿ ಪ್ರತಿಯೊಂದು ಆಭರಣವು ಅಪಾರ ಕಾಳಜಿ ಮತ್ತು ನಿಖರತೆಯಿಂದ ರಚಿಸಲಾಗಿದೆ. ಇದು ಇಂದಿನ ಆಧುನಿಕ ಮಹಿಳೆಯರ ಮತ್ತು ಯುವತಿಯರ ಗೌರವವನ್ನು ಮತ್ತಷ್ಟು ಹೆಚ್ಚಿಸಲಿದೆ. ಈ ಸಂಗ್ರಹವು ಧರಿಸಲು ಬಹಳ ಅನುಕೂಲಕರ ಮತ್ತು ಹಗುರವಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಈ ಸಂದರ್ಭದಲ್ಲಿ ಶಾಖಾ ಮುಖ್ಯಸ್ಥ ಆರ್.ಕೆ. ದಯಾನಂದ, ಸಿಬ್ಬಂದಿ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.