

ಕೊಪ್ಪಳ: ಜಿಲ್ಲೆಯಲ್ಲಿ ಅಪೌಷ್ಟಿಕತೆ ಅಧಿಕವಿದೆ. ನಿವಾರಣೆಗೆ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳ ಸುಧಾರಣೆ ಆಗಬೇಕಿದೆ. ನಮ್ಮ ಜಾಗೃತಿ ಸಂಸ್ಥೆಯಿಂದ ಸಮೀೆ ನಡೆಸಿ ನಿವಾರಣೆ ಸಾಧ್ಯವೆಂದು ತೋರಿಸಿದ್ದೇವೆ ಎಂದು ಧಾರವಾಡದ ವೈದ್ಯ ಡಾ.ಗೋಪಾಲ ದಾಬಡೆ ತಿಳಿಸಿದರು.
ಅಪೌಷ್ಟಿಕತೆ ದೇಶವನ್ನೇ ಕಾಡುತ್ತಿದೆ. ಶೇ.35ರಷ್ಟು ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ. ನೀತಿ ಆಯೋಗ ಪ್ರಕಟಿಸಿದ 100 ಜಿಲ್ಲೆಗಳಲ್ಲಿ ಕೊಪ್ಪಳವೂ ಒಂದು. ಕಳೆದ ಒಂದು ವರ್ಷದಿಂದ ನಾವು ಅಪೌಷ್ಟಿಕತೆ ವಿಷಯದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ. 6 ತಿಂಗಳಿಂದ 6 ವರ್ಷ ಮಕ್ಕಳಲ್ಲಿನ ಅಪವಷ್ಟಿಕತೆ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಕೊಪ್ಪಳ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ 2 ಸಾವಿರ ಮಕ್ಕಳನ್ನು ಸಮೀೆಗೆ ಒಳಪಡಿಸಿದ್ದೇವೆ. ಪ್ರತಿ ತಿಂಗಳು ತಾಯಿ&ಮಗುವನ್ನು ಭೇಟಿಮಾಡುತ್ತಿದ್ದೇವೆ. ಅಪೌಷ್ಟಿಕತೆಗೆ ಕಾರಣ, ಆಹಾರ ಪದ್ಧತಿ ಬದಲಾವಣೆ, ಪೌಷ್ಟಿಕ ಆಹಾರ ನೀಡುವಿಕೆ ಬಗ್ಗೆ ತಿಳಿಸಿದ್ದೇವೆಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.
ಅಪೌಷ್ಟಿಕತೆ ನಿವಾರಣೆಗೆ ಅಂಗನವಾಡಿಗಳಲ್ಲಿ ನೀಡುವ ಪುಷ್ಠಿ ಆಹಾರ ಬಹುತೇಕ ಮಕ್ಕಳು ಸೇವಿಸುತ್ತಿಲ್ಲ. ಬದಲಿಗೆ ವ್ಯರ್ಥ ಮಾಡುತ್ತಿದ್ದಾರೆ. ತೂಕದ ಯಂತ್ರಗಳು ಬದಲಾಗಬೇಕಿದೆ. ನಮ್ಮ ತೂಕದ ಯಂತ್ರದಲ್ಲಿ ತೋರಿಸುವ ತೂಕ ಹಾಗೂ ಅಂಗನವಾಡಿಗಳಲ್ಲಿನ ಯಂತ್ರಗಳು ತೋರಿಸುವ ತೂಕದಲ್ಲಿ ವ್ಯತ್ಯಾಸ ಕಂಡುಬಂದಿದೆ. ಐಸಿಡಿಎಸ್ ಪ್ರಕಾರ ಅಂಗನವಾಡಿಯಲ್ಲಿ ಪ್ರತಿದಿನ ಮೊಟ್ಟೆ ನೀಡಬೇಕು. ತೀವ್ರ ಅಪೌಷ್ಟಿಕತೆ ಇರುವ ಮಕ್ಕಳ ತಾಯಂದಿರು ಆರೋಗ್ಯ ಕೇಂದ್ರಗಳಲ್ಲಿ ಎನ್ಆರ್ಸಿಯಲ್ಲಿ ದಾಖಲಾಗಿ ಮಕ್ಕಳ ಆರೋಗ್ಯ ಸುಧಾರಿಸಬೇಕು. ಈ ಬಗ್ಗೆ ಹೆಚ್ಚಿನ ಜಾಗೃತಿ ಅಗತ್ಯವಿದೆ. ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಅಪೌಷ್ಟಿಕತೆ ನಿವಾರಿಸಬಹುದೆಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಸ್ಥೆಯ ಶಾರದಾ ಗೋಪಾಲ, ಮಂಜುಳಾ, ಶೀಲಾ ಹಾಲ್ಕುರಿಕೆ, ಲಕ್ಷಿ$್ಮ, ಸುಜಾತಾ ಇದ್ದರು.