ಮಾವಿನಹಳ್ಳಿ ಶಾಲೆಯಲ್ಲಿ ಮಕ್ಕಳ ಸಂತೆ

IMG_20231216_130809
Published on

ನುಗ್ಗೇಹಳ್ಳಿ: ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ವ್ಯವಹಾರ ಜ್ಞಾನವನ್ನೂ ವೃದ್ಧಿಸಿಕೊಳ್ಳಬೇಕು ಎಂದು ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಚ. ನ. ಅಶೋಕ್ ಹೇಳಿದರು. ಹೋಬಳಿಯ ಮಾವಿನಹಳ್ಳಿ ಕೋಟೆಮನೆ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಮಕ್ಕಳ ಸಂತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾವಯವ ಕೃಷಿಯಿಂದ ಬೆಳೆದ ತರಕಾರಿ ಮತ್ತು ಆಹಾರ ಪದಾರ್ಥಗಳನ್ನು ವಿದ್ಯಾರ್ಥಿಗಳು ನಿತ್ಯ ಉಪಯೋಗಿಸುವುದರಿಂದ ಆರೋಗ್ಯ ವೃದ್ಧಿಸುತ್ತದೆ ಎಂದವರು ಸಲಹೆ ನೀಡಿದರು. ವಿದ್ಯಾರ್ಥಿಗಳು ಜೀವನದ ಗುರಿ ತಲುಪಲು ಶ್ರದ್ಧೆ ವಹಿಸಿ ವ್ಯಾಸಂಗ ಮಾಡಬೇಕು ಎಂದು ಸಲಹೆ ನೀಡಿದರು
ಶಾಲೆಯ ಕಾರ್ಯದರ್ಶಿ ಮಧುಕುಮಾರ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಶಾಲಾ ಆವರಣದಲ್ಲಿ ಸಾವಯವ ಕೃಷಿ ಕೈತೋಟ ಮಾಡಲಾಗಿದೆ. ಇಲ್ಲಿ ತರಕಾರಿ, ಸೊಪ್ಪು ಮತ್ತು ಹಣ್ಣಿನ ಗಿಡಗಳನ್ನು ಬೆಳೆಸುವ ಮೂಲಕ ವಿದ್ಯಾರ್ಥಿಗಳಿಗೆ ಕೃಷಿ ಮಾಹಿತಿ ನೀಡಲಾಗುತ್ತಿದೆ ಎಂದರು. ಶಾಲೆ ಸಮಿತಿ ಅಧ್ಯಕ್ಷ ಗಂಗಾಧರ ಗೌಡ, ಪ್ರಾಂಶುಪಾಲರಾದ ಡಿ. ಪವಿತ್ರಾ, ಶಿಕ್ಷಕರಾದ ಗೀತಾ, ಚಿದಾನಂದ ಸ್ವಾಮಿ, ವಿಸ್ಮಯ, ಉಮೇರಾ ಬಾನು, ವಿದ್ಯಾಶ್ರೀ, ವೀಣಾ, ದಿವ್ಯಾ, ಶ್ರುತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net