

ಮಡಿಕೇರಿ: ವಿಶ್ವ ಮುಸ್ಲಿಮರ ಪರಮೋಚ್ಚ ಪವಿತ್ರವಾಗಿರುವ ಕಅಬಾ ಸಂದರ್ಶನ ವಿಶ್ವಸಿಗಳನ್ನು ಸತ್ಕರ್ಮಗಳೆಡೆಗೆ ಪ್ರೇರೇಪಿಸುತ್ತದೆ. ಪವಿತ್ರ ಮಕ್ಕ ಮತ್ತು ಮದೀನ ಮಣ್ಣಿನ ಸ್ಪರ್ಶ ಏಕತೆ ಮತ್ತು ಸಹೋದರತ್ವದ ಮನೋಭಾವವನ್ನು ಉತ್ತೇಜಿಸುತ್ತದೆ ಎಂದು ಕೊಂಡಗೇರಿ ಹಾರಿಸ್ ಮದನಿ ಹೇಳಿದರು.
ವಿರಾಜಪೇಟೆ ಎನ್‌ಸಿಟಿ ಸಂಸ್ಥೆ ವತಿಯಿಂದ ನಡೆದ ಉಮ್ರಾ ಯಾತ್ರಾರ್ಥಿಗಳ ವಿಶೇಷ ತರಬೇತಿ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಸಭೆಯನ್ನು ಉದ್ಘಾಟಿಸಿರವರು ಮಾತನಾಡಿದರು.
ಕಾರ್ಯಾಗಾರದಲ್ಲಿ ವಿಶೇಷ ತರಬೇತುದಾರರಾಗಿ ಪಾಲ್ಗೊಂಡಿದ್ದ ಯಾತ್ರೆಯ ಅಮೀರರಾದ ಹಮೀದ್ ಮದನಿರವರು ಉಮ್ರಾ ಯಾತ್ರೆಯ ಧಾರ್ಮಿಕ ವಿಧಿ ವಿಧಾನಗಳ ಕುರಿತು ಸಮಗ್ರವಾಗಿ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಎನ್‌ಸಿಟಿ ಮೂಲಕ ಉಮ್ರಾ ಯಾತ್ರಾರ್ಥಿಗಳಿಗೆ ಉಮ್ರಾ ಕಿಟ್‌ಗಳನ್ನು ವಿತರಿಸಲಾಯಿತು.
ವಿರಾಜಪೇಟೆಯ ಎನ್‌ಸಿಟಿ ವ್ಯವಸ್ಥಾಪಕ ಕೆ.ಎ.ಹನೀಫ್, ನಝೀರ್ ಸಖಾಫಿ ಕುಂಜಿಲ, ಎಂ.ಎ.ಮಸೂದ್ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನೂರಾರು ಯಾತ್ರಾರ್ಥಿಗಳು ಪಾಲ್ಗೊಂಡಿದ್ದರು.