ಅಭಿವೃದ್ಧಿಗೆ ಅವಕಾಶ ಸದ್ಬಳಕೆ

22MNL1
Published on

ಮುನವಳ್ಳಿ: ಸಿಕ್ಕಿರುವ ಅವಕಾಶ ಸದ್ಬಳಕೆ ಮಾಡಿಕೊಂಡು ಹಲವಾರು ಅಭಿವೃದ್ಧಿ ಕಾಮಗಾರಿ ಮಾಡುತ್ತಿರುವುದಾಗಿ ಎಂಎಲ್​ಸಿ ಚನ್ನರಾಜ ಹಟ್ಟಿಹೊಳಿ ಹೇಳಿದರು.

ವಿಧಾನ ಪರಿಷತ್​ ಸ್ಥಳಿಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಮಂಜೂರಾದ 8 ಲ ರೂ. ವೆಚ್ಚದ ಪಟ್ಟಣದ ಗರೀಬಶಾ ದರ್ಗಾದ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.

ಶಾಸಕ ವಿಶ್ವಾಸ ವೆದ್ಯ ಮಾತನಾಡಿ, ಸವದತ್ತಿ ಯಲ್ಲಮ್ಮ ೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ಜರುಗುತ್ತಿದ್ದು ಎಂಎಲ್​ಸಿ ಚನ್ನರಾಜ ಹಟ್ಟಿಹೊಳಿ ಅವರು ನನ್ನ ೇತ್ರಕ್ಕೆ ವಿಧಾನ ಪರಿಷತ್ತಿನ ಯೋಜನೆಯಡಿ ಅನುದಾನ ಮಂಜೂರ ಮಾಡಿಸಿರುವುದು ಸ್ವಾಗತಾರ್ಹ ಎಂದರು.

ಮುಸ್ಲಿಂ ಧರ್ಮಗುರು ಅಬ್ದುಲ್​ಮಜೀದ ಬೈರಕದಾರ, ಪುರಸಭೆ ಅಧ್ಯ ಸಿ.ಬಿ.ಬಾಳಿ, ಎಪಿಎಂಸಿ ಅಧ್ಯ ಚಂದ್ರು ಜಂಬ್ರಿ, ಬ್ಲಾಕ್​ ಕಾಂಗ್ರೆಸ್​ ಅಧ್ಯ ಡಿ.ಡಿ.ಟೋಪೋಜಿ, ಪುರಸಭೆ ಸದಸ್ಯ ಮೀರಾಸಾಬ ವಟ್ನಾಳ, ಗರೀಬಶಾ ಮಕಾನದಾರ, ಕುತುಬುದ್ದೀನ್​ ಹುಕ್ಕೇರಿ, ಬಂದೇನವಾಜ್​ ಬಹಾದ್ದೂರಭಾಯಿ, ಸಲೀಂ ಹುಕ್ಕೇರಿ, ಜುಬೇರ ತೊರಗಲ್ಲ, ಚಂದ್ರು ಮುಚ್ಚಂಡಿ, ಐ.ಕೆ.ಖೊಂದುನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net