ಹಣಗಳಿಕೆ ಶಿಕ್ಷಣದ ಗುರಿಯಲ್ಲ

8SANKESHWAR1
Published on

ಸಂಕೇಶ್ವರ: ಪರಿಪೂರ್ಣ ಶಿಕ್ಷಣದಿಂದ ವ್ಯಕ್ತಿತ್ವ ನಿರ್ಮಾಣ ಸಹಜವಾಗುತ್ತದೆ ಎಂದು ಪ್ರಾಚಾರ್ಯ ಡಾ.ಎಸ್.ಸಿ.ಕಮತೆ ಹೇಳಿದರು.

ಸಮೀಪದ ನಿಡಸೋಸಿ ಹಿರಾಶುಗರ್ಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ಇಂಜಿನಿಯರಿಂಗ್ ಕೋರ್ಸ್ಗಳ ಪ್ರಸಕ್ತ ಶೈಕ್ಷಣಿಕ ವರ್ಷ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಕೇವಲ ಹಣ ಗಳಿಕೆ ಶಿಕ್ಷಣದ ಪರಮ ಗುರಿಯಾಗಬಾರದು. ಮಾನವೀಯ ಮೌಲ್ಯಗಳ ಮೂಲಕ ಸತ್ಪ್ರಜೆ ರೂಪಿಸುವ ಜವಾಬ್ದಾರಿ ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದು ತಿಳಿಸಿದರು.

ವಿದ್ಯಾರ್ಥಿ ಮಂದಾರ ಹಾಲಬಾವಿ ಮಾತನಾಡಿ, ವಿದ್ಯಾರ್ಥಿಗಳು ನೌಕರಿ ಹಿಂದೆ ಬೀಳದೆ ಸಂಶೋಧನೆ ಮತ್ತು ಆವಿಷ್ಕಾರ ಮಾಡುವುದರಲ್ಲಿ ತೋಡಗಿಸಿಕೊಂಡು ಉದ್ಯಮಶೀಲರಾಗಬೇಕು ಎಂದರು.

ಪ್ರಥಮ ವರ್ಷದ ಸಂಯೋಜಕ ಡಾ.ಎಂ.ಪಿ.ಏಣಗಿಮಠ ಸ್ವಾಗತಿಸಿದರು. ಡಾ.ಎಂ.ಎಸ್.ಹನಗಡಕರ ವಂದಿಸಿದರು. ಡಾ.ತನುಜಾ ಎಸ್.ಬಿ. ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net