ಅರಿವು ಸಂಸ್ಥೆಯಿಂದ ಮೇಕರ್ ಸ್ಪೇಸ್ ಆರಂಭ

Circulation1.jpeg arivu
Published on


ಮೈಸೂರು: ನಗರದ ಲಿಂಗಾಂಬುದಿ ಪಾಳ್ಯದಲ್ಲಿರುವ ಅರಿವು ವಿದ್ಯಾಸಂಸ್ಥೆ ಮಾಡಿ ಕಲಿಯುವ ತಾಣವಾಗಿ ಮೇಕರ್ ಸ್ಪೇಸ್ ಅಥವಾ ಮಾಡುಗರ ಮಾಳಿಗೆಯನ್ನು ಆರಂಭಿಸುತ್ತಿದೆ.


‘ಆರ್.ಕೆ.ರಾವ್ ಸ್ಮಾರಕ ಮಾಡುಗರ ಮಾಳಿಗೆ’ ಯಲ್ಲಿ ನ.1ನೋಂದಣಿಯನ್ನು ಆರಂಭಿಸಲಾಗುತ್ತಿದೆ. ಅರಿವು ಲ್ಯಾಬ್ ಮಾಡುಗರ ಮಳಿಗೆಯು ಒಂದು ಸಹಯೋಗಿ ಮತ್ತು ಕ್ರಿಯಾಶೀಲತೆಯ ಕಮ್ಮಟವಾಗಿದೆ. ಇಲ್ಲಿ ಸಾಧನ, ಸಲಕರಣೆಗಳನ್ನು ಬಳಸಿ ಹೊಸತನ್ನು ಮಾಡುವುದು, ಕಲಿಯುವುದು, ಅನ್ವೇಷಣೆ ಮತ್ತು ಹಂಚಿಕೊಳ್ಳುವುದು ಎಲ್ಲವೂ ಇರಲಿದೆ.

ಅರಿವು ಲ್ಯಾಬ್ ಅರಿವು ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗಷ್ಟೇ ಅಲ್ಲದೇ ಇತರ ಶಾಲೆ/ಕಾಲೇಜುಗಳ ವಿದ್ಯಾರ್ಥಿಗಳಿಗೂ ತೆರೆದಿರಲಿದೆ. ಆಸಕ್ತ ವಯಸ್ಕರೂ ಮತ್ತು ಅಗತ್ಯವಿರುವ ಉದ್ಯಮಿಗಳೂ ಬಳಸಿಕೊಳ್ಳಬಹುದು. ಅರಿವು ಲ್ಯಾಬ್ಸ್‌ನಲ್ಲಿ ತೊಡಗಿಕೊಳ್ಳುವುದು ಮಾಡಿ ಕಲಿಯುವಿಕೆ, ವಿಶ್ಲೇಷಣಾತ್ಮಕ ಚಿಂತನಾ ಕೌಶಲಗಳು ಮತ್ತು ಹೆಚ್ಚಿನ ಆತ್ಮಸ್ಥೈರ್ಯಗಳನ್ನು ನೀಡಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net