ಬಹು ಆಯ್ಕೆಗಳಿಂದ ಕನಸು ನನಸು

h18-ima womes wing
Published on

ಹುಬ್ಬಳ್ಳಿ: ನಾನು ಒಂದನ್ನೇ ಆಯ್ಕೆ ಮಾಡಿಕೊಂಡು ಅದರಲ್ಲಿ ಪರಿಣತಿ ಪಡೆಯುತ್ತೇನೆ ಎಂದುಕೊಳ್ಳುವುದಿಲ್ಲ. ಚಿಕ್ಕಂದಿನಿಂದಲೇ ಬಹು ಆಯ್ಕೆಯೇ ನನ್ನ ಫ್ಯಾಷನ್. 5ನೇ ವಯಸ್ಸಿನಿಂದಲೇ ಇಂಥ ಮಲ್ಟಿ ಟ್ಯಾಲೆಂಟ್ ಪ್ರಯೋಗ ಮಾಡುತ್ತ ಬಂದಿದ್ದೇನೆ ಎಂದು ಮಿಸ್ ಯುನಿವರ್ಸಲ್ ಪಿಟೈಟ್ 2024(ಭುವನ ಸುಂದರಿ) ಡಾ. ಶ್ರುತಿ ಹೆಗಡೆ ಖುಷಿ ಹಂಚಿಕೊಂಡರು.
ಭಾರತೀಯ ವೈದ್ಯಕೀಯ ಸಂಘ (ಐಎಂಎ) ಹುಬ್ಬಳ್ಳಿ ಮಹಿಳಾ ಘಟಕದ ವತಿಯಿಂದ ನಗರದ ಐಎಂಎ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಚಿಕ್ಕಂದಿನಿಂದಲೇ ವಿವಿಧ ಕನಸ್ಸು ಹೊತ್ತು ಸಾಗಿದೆ. ಸಂಗೀತ, ನೃತ್ಯ ಕಲಿತೆ. ಫ್ಯಾಶನ್ ಕೂಡ ಆಯ್ಕೆ ಮಾಡಿಕೊಂಡೆ. ವೈದ್ಯಕೀಯ ಅಧ್ಯಯನ ಮಾಡುತ್ತಿದ್ದರೂ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ. ಪ್ರತಿಯೊಂದು ಹಂತವೂ ನನಗೆ ಕಷ್ಟವಾಗಲಿಲ್ಲ. ಇಷ್ಟಪಟ್ಟಂತೆಯೇ ನೆರವೇರುತ್ತ ಹೋಗುತ್ತಿದೆ ಎಂದು ತಮ್ಮ ಬಗ್ಗೆ ಹೇಳಿಕೊಂಡರು.
ನಂತರ ಪ್ರಶ್ತೋತ್ತರ ಸಂವಾದ ನಡೆಯಿತು. ಮಹಿಳಾ ಘಟಕದ ಅಧ್ಯಕ್ಷೆ ಡಾ. ಭಾರತಿ ಭಾವಿಕಟ್ಟಿ, ಕಾರ್ಯದರ್ಶಿ ಡಾ. ಆಶಾ ಪಾಟೀಲ, ಖಜಾಂಚಿ ಡಾ. ಶಿಲ್ಪಾ ಚಾಟ್ನಿ, ಮಾಜಿ ಅಧ್ಯಕ್ಷರಾದ ಡಾ. ಸಂಗೀತಾ ಅಂಟರತಾನಿ, ಡಾ. ಶಶಿಕಲಾ ಹೊಸಮನಿ, ಡಾ. ಜಯಶ್ರೀ ಬಳಿಗಾರ, ಇತರರಿದ್ದರು. ಡಾ. ರಂಜನಾ ಮಯ್ಯ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net